BengaluruLifestyleNational

ದಶಕದ ನಂತರ ಅತಿ ಕಡಿಮೆ ತಾಪಮಾನ ದಾಖಲು; ಬೆಂಗಳೂರಲ್ಲಿ ಮೈಕೊರೆಯೋ ಚಳಿ

ಬೆಂಗಳೂರು; ಈ ಬಾರಿ ಅವಧಿಗಿಂತ ಮುಂಚೆಯೇ ಚಳಿಗಾಲ ಶುರುವಾಗಿದೆ. ಅದ್ರಲ್ಲೂ ಬೆಂಗಳೂರು ಸೇರಿ ಭಾರತದ ಪ್ರಮುಖ ನಗರಗಳಲ್ಲಿ ದಶಕದ ನಂತರ ಇದೇ ಮೊದಲ ಬಾರಿಗೆ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ದೆಹಲಿ ನಗರದಲ್ಲಿ ಅತ್ಯಧಿಕ ಚಳಿ ದಾಖಲಾಗಿದೆ.

ಬೆಂಗಳೂರಿನಲ್ಲಿ ನಿನ್ನೆ 13.9 ಡಿಗ್ರಿ ತಾಪಮಾನ ದಾಖಲಾಗಿದ್ದು, ಬೆಂಗಳೂರಿನ ಕೊರೆಯುವ ಚಳಿಗೆ ತತ್ತರಿಸಿದ್ದಾರೆ. ಇದು ಕಳೆದ ಒಂದು ದಶಕದಲ್ಲೇ ಅತ್ಯಂತ ಕಡಿಮೆ ಪ್ರಮಾಣದ ತಾಪಮಾನ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ಬೆಂಗಳೂರಿನಲ್ಲಿ ನವೆಂಬರ್ 21, 2012 ರಂದು ಕೊನೆಯ ಬಾರಿ ಅತ್ಯಂತ ಕಡಿಮೆ ಪ್ರಮಾಣದ ತಾಪಮಾನ ದಾಖಲಾಗಿತ್ತು. 

ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕನಿಷ್ಟ ತಾಪಮಾನ 17 ಡಿಗ್ರಿ ಸೆಲ್ಸಿಯಸ್‌ನಷ್ಟ ತಲುಪುತ್ತದೆ. ಆದ್ರೆ ಅದಕ್ಕಿಂತ ಕಡಿಮೆಯಾಗುವುದು ಅಪರೂಪ. 1957ರಲ್ಲಿ ಒಮ್ಮೆ ಬೆಂಗಳೂರಿನಲ್ಲಿ ತಾಪಮಾನ 9.6 ಡಿಗ್ರಿ ಸೆಲ್ಸಿಯಸ್‌ ನಷ್ಟು ದಾಖಲಾಗಿತ್ತು. ಅದಾದ ಮೇಲೆ ಮೂರನೇ ಬಾರಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ.

ಇನ್ನು ಮುಂಬೈ, ದೆಹಲಿ ಹಾಗೂ ಚೆನ್ನೈನಲ್ಲೂ ತಾಪಮಾನ ಕಡಿಮೆಯಾಗಿದ್ದು, ಚಳಿ ಹೆಚ್ಚಾಗಿದೆ. ಬೆಳಗ್ಗೆ ಹತ್ತು ಗಂಟೆಯಾದರೂ ಚಳಿ ಕಡಿಮೆಯಾಗುತ್ತಿಲ್ಲ.

 

Share Post