BengaluruCrime

ಮಲಗಿದ್ದಲ್ಲೇ ಹಾರಿಹೋಯ್ತು ಬಾಲಕಿ ಪ್ರಾಣ ಪಕ್ಷಿ: ಟೆಂಪೋ ರೂಪದಲ್ಲಿ ಬಾಲಕಿ ಮೇಲೆರಗಿದ ಜವರಾಯ

ಬೆಂಗಳೂರು: ಟೆಂಪೋ ಹರಿದು ಏಳು ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ನಗರದ ಕೆ.ಆರ್.ಮಾರ್ಕೆಟ್‌ನಲ್ಲಿ ನಡೆದಿದೆ ಶಿವನ್ಯ(7) ಮೃತ ಬಾಲಕಿ. ತಮಿಳುನಾಡಿನಿಂದದ ವ್ಯಾಪಾರಕ್ಕೆಂದು ಬಂದಿದ್ದ ಹಕ್ಕಿ-ಪಿಕ್ಕಿ ಜನಾಂಗಕ್ಕೆ ಸೇರಿದ ಬಾಲಕಿ ಎನ್ನಲಾಗಿದೆ.  ಹೊಟ್ಟೆಪಾಡಿಗಾಗಿ ಜಾತ್ರೆಗಳಲ್ಲಿ ಸರ-ಬಳೆ ಮಾರಿ ತಮ್ಮ ಜೀವನವನ್ನು ನಿರ್ವಹಣೆ ಮಾಡುತ್ತಿದ್ದರು. ಇಂದು ಬೆಳಗಿನ ಜಾವ ಕೆ.ಆರ್‌.ಮಾರ್ಕೆಟ್‌ನಲ್ಲಿ ಮಲಗಿರುವ ವೇಳೆ ಜವರಾನಂತೆ ಬಂದ ಟೆಂಪೋ ಮಲಗಿದ್ದ ಬಾಲಕಿ ಮೇಲೆ ಹರಿದಿದೆ. ಬಾಲಕಿ ಸ್ಥಳದಲ್ಲೇ ರಕ್ತಸಿಕ್ತವಾಗಿ ಸಾವನ್ನಪ್ಪಿದ್ದಾಳೆ.

ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಟ್ಟೆಪಾಡಿಗಾಗಿ ಊರಿಂದ ಊರಿಗೆ ಬಂದು ಜೀವನ ನಡೆಸುತ್ತಿದ್ದ ಬಾಲಕಿ ಹೆತ್ತವರಿಗೆ ಶಾಕ್‌ ಆಗಿದೆ. ಜೊತೆಯಲ್ಲೇ ಮಲಗಿದ್ದ ಮಗಳು ಬೆಳಗಾಗುವಷ್ಟರಲ್ಲಿ ಹೆಣವಾಗಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Share Post