Bengaluru

ಮುಗಿಯದ ಟಿಪ್ಪು ಪಠ್ಯಪುಸ್ತಕ ಗೊಂದಲ: ಸಮಿತಿ ಮುಂದೆ ಅಪ್ಪಚ್ಚು ರಂಜನ್‌ ವರದಿ-ಶಿಕ್ಷಣ ಸಚಿವ

ಬೆಂಗಳೂರು: ಇತಿಹಾಸದಲ್ಲಿ ಟಿಪ್ಪು ಸುಲ್ತಾನ್‌ ಬಗ್ಗೆ ವೈಭವೀಕರಿಸಕಲಾಗಿದೆ ಎಂದು ಆರೋಪಿಸಿ ಪಠ್ಯವನ್ನು ಮರುಪರಿಶೀಲನೆ ಮಾಡಬೇಕೆಂದು ಈಗಾಗಲೇ ಸಾಕಷ್ಟು ಒತ್ತಾಯ ಸರ್ಕಾರಕ್ಕೆ ಬಂದಿದೆ. ಅದರಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್‌ ನೀಡಿರುವ 16 ಪುಟಗಳ ವರದಿ ಏನಿದೆ ಅದನ್ನು ಪಠ್ಯಪುಸ್ತಕ ಪರಿಶೀಲನೆ ಮುಂದಿಡಲು ಬಿ.ಸಿ.ನಾಗೇಶ್‌ ತೀರ್ಮಾನ ಮಾಡಿದ್ದಾರೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಟಿಪ್ಪು ಸುಲ್ತಾನ್‌ ಅಂದು ಬರೆದ ಪತ್ರಗಳ ಆಧಾರದ ಮೇಲೆ ಈಗ ಹೊರತಂದಿರುವ ಪುಸ್ತಕಗಳ ರೆಫರೆನ್ಸ್‌ ಅನ್ನು ಅಪ್ಪಚ್ಚು ರಂಜನ್ ನನಗೆ ಕೊಟ್ಟಿದ್ದಾರೆ. ಅದನ್ನು ಸಮಿತಿ ಮುಂದಿಡುವ ಕೆಲಸ ಮಾಡ್ತೇನೆ.‌ ಅವರು ನೀಡಿರುವ ವರದಿಯಲ್ಲಿ ಇರುವುದು ಕೇವಲ ಎರಡೇ ವಿಚಾರ.     ೧. ಟಿಪ್ಪು ಸುಲ್ತಾನ್‌ ಬಗ್ಗೆ ಅಸತ್ಯಗಳನ್ನು ತೆಗೆಯಿರಿ, ೨. ಟಿಪ್ಪು ಮಾಡಿರುವ ಒಳ್ಳೆಯದು ಹಾಗೂ ಕೆಟ್ಟದ್ದು ಎರಡನ್ನೂ ತೋರಿಸಿ ಎಂದು ಅಪ್ಪಚ್ಚು ರಂಜನ್‌ ಮನವಿ ಮಾಡಿದ್ದಾರೆ. ಅಪ್ಪಚ್ಚು ರಂಜನ್‌ ನೀಡಿರುವ ವರದಿ ಆಧಾರವನ್ನು ನಾನು ಸಮಿತಿಗೆ ನೀಡಲಿದ್ದೇನೆ. ಸಮಿತಿ ತೀರ್ಮಾನದ ಮೇರೆಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಹೇಳಿದ್ದಾರೆ.

ಈ ಟಿಪ್ಪು ಪಠ್ಯ ಮರುಪರಿಶೀಲನೆ ವಿಚಾರವನ್ನು ಅಪ್ಪಚ್ಚು ರಂಜನ್‌ 2019ರಲ್ಲೇ ಸರ್ಕಾರಕ್ಕೆ ಕಡಿವಾಣ ಹಾಕುವಂತೆ ಮನವಿ ಸಲ್ಲಿಸಿದ್ರು. ಸುಮಾರು 16 ಪುಟಗಳ ವರದಿಯನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಟಿಪ್ಪು ಪಠ್ಯದ ಬಗ್ಗೆ ಪರಿಷ್ಕರಣೆ ಮಾಡಬೇಕು,ಟಿಪ್ಪು ವಿಚಾರವನ್ನು ಪಠ್ಯದಿಂದ ಕೈಬಿಡಬೇಕು ಎಂಬುದರ ಬಗ್ಗೆ ವರದಿ ಸಲ್ಲಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚಾಗಿ ವೈಭವೀಕರಣ ಮಾಡಲಾಗಿದೆ ಎಂಬುದನ್ನು ತಮ್ಮ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

Share Post