Bengaluru

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಸಮರ: ಮಾರ್ಚ್‌31 ರಂದು ಪ್ರತಿಭಟನೆಗೆ ಡಿಕೆಶಿ ಕರೆ

ಬೆಂಗಳೂರು: ದೇಶದಾದ್ಯಂತ ಹೆಚ್ಚುತ್ತಿರುವ ಪೆಟ್ರೋಲ್‌, ಡೀಸೆಲ್‌, ಹಾಗೂ ಅಡುಗೆ ಎಣ್ಣೆ, ಗ್ಯಸ್‌ ಸಿಲಿಂಡರ್‌, ಚಿನ್ನ, ಬೆಳ್ಳಿ ಸೇರಿದಂತೆ ಇತರೆ ಪದಾರ್ಥಗಳ ಏರಿಕೆಗೆ ಜನ ಹೈರಾಣಾಗಿದ್ದಾರೆ. ಇದನ್ನು ಅಸ್ತ್ರವಾಗಿ ಬಳಸಿಕೊಂಡು ಆಡಳಿತ ಪಕ್ಷಗಳ ವಿರುದ್ಧತೊಡೆ ತಟ್ಟಲು ವಿಪಕ್ಷಗಳು ಸಜ್ಜಾಗಿವೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿಬಟನೆ ನಡೆಸಲು ಕಾಂಗ್ರೆಸ್‌ ನಿರ್ಧಾರ ಮಾಡಿದೆ.

ದಿನೇ ದಿನೇ ಏರುತ್ತಿರುವ ದಿನನಿತ್ಯ ಸರಕು, ತೈಲ ಬೆಲೆ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್‌ ಸಜ್ಜಾಗಿದೆ. ಇದೇ ತಿಂಗಳ ಮಾರ್ಚ್‌ 31 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಲು ತೀರ್ಮಾನ ಮಾಡಿವೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕಡ.ಶಿವಕುಮಾರ್‌ ಕರೆ ನೀಡಿದ್ದು, ಪ್ರತಿಭಟನೆ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.

ಪ್ರತಿಭಟನೆ ಅಂದ್ರೆ ಬೀದಿಗಳಿದು ನಡೆಸೋದಲ್ಲ. ತಾವುರುವ ಸ್ಥಳದಿಂದಲೇ ಗ್ಯಾಸ್‌ ಸಿಲಿಂಡರ್‌, ಬೈಕ್‌, ಕಾರು, ಇತರೆ ವಾಹನಗಳಿಗೆ ಹೂವಿನ ಹಾರ ಹಾಕಿ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ  ಆ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಎಂದು ಕರೆ ನೀಡಿದ್ದಾರೆ. ಏಪ್ರಿಕ್‌ 3ರಂದು ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ನಿರ್ಧಾರ ಮಾಡಿದೆ.

Share Post