International

ಜರ್ಮನಿಯಿಂದ ಉಕ್ರೇನ್‌ಗೆ 1500 ಕ್ಷಿಪಣಿಗಳು, 100 ಮಷಿನ್‌ ಗನ್‌ಗಳ ಪೂರೈಕೆ

ಜರ್ಮನಿ: ಉಕ್ರೇನ್‌ ಹಾಗೂ ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ತಿಂಗಳಿಗೂ ಹೆಚ್ಚು ದಿನಗಳಿಂದ ರಷ್ಯಾ ಮಿಲಿಟರಿ ಪಡೆ ಉಕ್ರೇನ್‌ ಮೇಲೆ ದಾಳಿ ನಡೆಸುತ್ತಲೇ ಇದೆ. ಈ ನಡುವೆ ಉಕ್ರೇನ್‌ ಕೂಡಾ ರಷ್ಯಾಗೆ ಪ್ರತಿಯಾಗಿ ಹೋರಾಟ ನಡೆಸುತ್ತಿದೆ. ಇದೀಗ ಉಕ್ರೇನ್‌ ನೆರವಿಗೆ ಜರ್ಮನಿ ಬಂದಿರುವ , ಉಕ್ರೇನ್‌ಗೆ ಬಲ ಬಂದಂತಾಗಿದೆ.

ಉಕ್ರೇನ್‌ಗೆ ಜರ್ಮನಿ ಯುದ್ಧ ಸಾಮಗ್ರಿಗಳನ್ನು ಪೂರೈಕೆ ಮಾಡಿದೆ. 1500 ಸ್ಟ್ರೆಲಾ ಯಾಂಟಿ ಏರ್‌ಕ್ರಾಫ್ಟ್‌ ಕ್ಷಿಪಣಿಗಳನ್ನು ಜರ್ಮನಿ ದೇಶ ಉಕ್ರೇನ್‌ಗೆ ಈಗಾಗಲೇ ಕಳುಹಿಸಿದೆ. ಇದರ ಜೊತೆಗೆ 100 ಎಂಜಿ3 ಮಷಿನ್‌ ಗನ್ಸ್‌ ಕೂಡಾ ಉಕ್ರೇನ್‌ ಸೇರಿವೆ. ಈ ವಿಚಾರವನ್ನು ಜರ್ಮನಿ ಪ್ರೆಸ್‌ ಏಜೆನ್ಸಿ ತಿಳಿಸಿದೆ.

     ಇದು ನಮಗೆ ಗರ್ವದ ರೀತಿ ಇಲ್ಲ. ಆದರೂ, ಉಕ್ರೇನ್‌ಗೆ ಸಹಾಯ ಮಾಡುವುದಕ್ಕಾಗಿ ನಾವು ಈ ಆಯುಧಗಳನ್ನು ಕಳುಹಿಬೇಕಾಗಿ ಬಂತು ಎಂದು ಜರ್ಮನಿ ವಿದೇಶಾಂತ ಮಂತ್ರಿ ಅನ್ನಾ ಲೆನಾ ಬೇರ್‌ಬಾಕ್‌ ಹೇಳಿದ್ದಾರೆ. ಈ ವಿಚಾರವನ್ನು ಖಾಸಗಿ ಸುದ್ದಿ ಸಂಸ್ಥೆಯೊಂದು ಹಂಚಿಕೊಂಡಿದೆ.

Share Post