National

ಕ್ಷುಲ್ಲಕ ಕಾರಣಕ್ಕೆ ಜಗಳ; ಪ್ರೇಮಿಗಳಿಬ್ಬರೂ ಆತ್ಮಹತ್ಯೆ

ಮುಜಾಫ್ಫರ್‌ಪುರ:  ಫೋನ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡ ಪ್ರೇಮಿಗಳು ಬೇರೆ ಬೇರೆ ಕಡೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಹಾರದ ಮುಜಾಫರ್‌ಪುರದ 23 ವರ್ಷದ ಅಂಜಲಿ ಮತ್ತು ಜೈಪುರದಲ್ಲಿ ನೆಲೆಸಿದ್ದ ವಿವೇಕ್​ ಮೃತ ಪ್ರೇಮಿಗಳು. ಯುವತಿ ಮುಜಾಫರ್‌ಪುರ್‌ನಲ್ಲಿ ನೇಣಿಗೆ ಶರಣಾಗಿದ್ದರೆ, ವಿವೇಕ್‌ ಜೈಪುರದಲ್ಲಿ ಎಂಟನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

   ಮೃತ ಅಂಜಲಿ ಚಾರ್ಟೆಡ್ ಅಕೌಂಟೆಂಟ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಕಳೆದ ಬುಧವಾರ ರಾತ್ರಿ ವಿವೇಕ್ ಜತೆ​ ಫೋನ್​ನಲ್ಲಿ ಮಾತನಾಡುತ್ತಲೇ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಇದಾದ ನಂತರವೇ ಅಂದು ರಾತ್ರಿಯೇ ಅಂಜಲಿ ತನ್ನ ಕೋಣೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿದ ವಿವೇಕ್‌ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾನೆ.

Share Post