Districts

ವಿಜಯಪುರದಲ್ಲಿ ಮತ್ತೆ ಭೂಕಂಪದ ಅನುಭವ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ವಿಜಯಪುರ: ಪದೇ ಪದೇ ಭೂಕಂಪದ ಅನುಭವ ಆಗ್ತಿದೆ ವಿಜಯಪುರ ಜಿಲ್ಲೆಯ ಜನತೆಗೆ ಕಳೆದ ಜನವರಿಯಲ್ಲಷ್ಟೇ ಭೂಕಂಪ ಉಂಟಾಗಿತ್ತು. ಇದೀಗ ಮತ್ತೆ ಇಂದು ಬೆಳಗ್ಗೆ ಅದೇ ಅನುಭವ ಆಗಿದೆ. ರಿಕ್ಟರ್‌ ಮಾಪಕದಲ್ಲಿ ಭೂಮಿ ಕಂಪಿಸಿದ ಬಗ್ಗೆ ಯಾವುದೇ ದಾಖಲಾತಿ ಇಲ್ಲ. ಬೆಳಗ್ಗೆ 11.22ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ಅನುಭವದಿಂದ ಜನರು ಭಯಗೊಂಡಿದ್ದಾರೆ. ಮನೆಯಿಂದ ಹೊರಗಡೆ ಬಂದು ಜನ ರಸ್ತೆಯಲ್ಲಿ ಕೆಲಕಾಲ ನಿಂತಿದ್ರು.

ಕಳೆದ ಜನವರಿ 30ರಂದು ಬೆಳಿಗ್ಗೆ 9.15 ಗಂಟೆಗೆ ಭೂಕಂಪ ಉಂಟಾಗಿತ್ತು. ರಿಕ್ಟರ್ ಮಾಪನದಲ್ಲಿ2.9 ರಷ್ಟು ತೀವ್ರತೆ ದಾಖಲಾಗಿತ್ತು.  ಭೂಮಿಯ 5 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿತ್ತು. ವಿಜ್ಞಾನಿಗಳ ತಂಡ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ  ವಿಜ್ಞಾನಿಗಳ ತಂಡ ಸ್ಥಳೀಯರಲ್ಲಿ ಧೈರ್ಯ ತುಂಬಿದ್ದರು.  ಇದೀಗ ಮತ್ತೆ ಅಂತಹದ್ದೇ ಘಟನೆಗಳು ಮರುಕಳಿಸಿದ್ದು ಜನರನ್ನು ಭಯಭೀತಗೊಳಿಸಿವೆ. ಯಾವುದೇ ಅಪಾಯ ಆಗಿಲ್ಲ ಮನೆ ಕಿಟಕಿ ಗಾಜುಗಳು ಒಡೆದು, ಮನೆಯಲ್ಲಿನ ಪಾತ್ರೆಗಳು ನೆಲಕ್ಕುರುಳಿದ ಅನುಭವ ಆಗಿದೆ ಅಂತಿದಾರೆ ಸ್ಥಳೀಯರು.

Share Post