Districts

ಕುಡಿತಿನಿ ಥರ್ಮಲ್‌ ಪ್ಲಾಂಟ್‌ನಲ್ಲಿ ಸ್ಫೋಟ; ಮೂವರಿಗೆ ಗಾಯ

ಬಳ್ಳಾರಿ: ಇಲ್ಲಿಗೆ ಸಮೀಪದ ಕುಡತಿನಿ ಬಳಿಯ ಬಳ್ಳಾರಿ ಥರ್ಮಲ್​ ಪವರ್​ ಸ್ಟೇಷನ್​ ವಿದ್ಯುತ್ ಸ್ಥಾವರದ ಆಕ್ಸಿಜನ್ ಪ್ಲ್ಯಾಂಟ್​ನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಮೂವರು ಕಾರ್ಮಿಕರಿಗೆ ಗಂಭೀರ ಗಾಯವಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಕಳೆದ ರಾತ್ರಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

      ಶುಕ್ರವಾರ ರಾತ್ರಿ ಆಕ್ಸಿಜನ್ ಫಿಲ್ಲಿಂಗ್ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸ್ಫೋಟವಾಗಿದೆ. ಸ್ಫೋಟದಿಂದ ಬೆಂಕಿ ಹೊತ್ತಿ ಉರಿದಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಿಟಿಪಿಎಸ್ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡತಿನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Share Post