Districts

ವಿಧಿಯಾಟಕ್ಕೆ ಅಪ್ಪುಅಭಿಮಾನಿ ಬಲಿ: ಬರ್ತಡೇ ಸೆಲಬ್ರೇಷನ್‌ ವೇಳೆ ಹೃದಯಾಘಾತ

ಮೈಸೂರು: ನಿನ್ನೆ ಕರುನಾಡ ಯುವರತ್ನ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಹುಟ್ಟು ಹಬ್ಬ ಸಂಭ್ರಮ. ಅಪ್ಪು ನಮ್ಮನ್ನಗಲಿ ಐದು ತಿಂಗಳು ಕಳೆದಿವೆ ಆ ನೋವಿನಲ್ಲಿಯೇ ಅಭಿಮಾನಿಗಳು ಅಪ್ಪು ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಬಹಳ ಅದ್ದೂರಿಯಾಗಿ, ಅರ್ಥಪುಋಣವಾಗಿ ಆಚರಣೆ ಮಾಡಿದ್ದಾರೆ. ಮೈಸೂರಿನಲ್ಲೂ ಕೂಡ ಜೇಮ್ಸ್‌ ಚಿತ್ರ ಬಿಡುಗಡೆ ಹಿನ್ನೆಲೆ ಕಟೌಟ್‌ ಹಾಕಿ, ಹಾಲಿನ ಅಭಿಷೇಕ ಅನ್ನಸಂತರ್ಪಣೆ ಮುಂತಾದ ಸಮಾಜ ಮುಖಿ ಕಾರ್ಯಗಳನ್ನು ಫ್ಯಾನ್ಸ್‌ ಹಮ್ಮಿಕೊಂಡಿದ್ರು.

ಈ ವೇಳೆ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಯೊಬ್ಬ ಹುಟ್ಟು ಹಬ್ಬ ಆಚರಣೆ ಮಾಡುತ್ತಲೇ ಕುಸಿದು ಬಿದ್ದಿದ್ದಾರೆ. ನಿನ್ನೆ ಆಸ್ಪತ್ರೆಗೆ ದಾಖಲು ಮಾಡಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. 22ವರ್ಷದ ಆಕಾಶ್‌ ಎಂಬ ಅಪ್ಪು ಅಭಿಮಾನಿ ಮೈಸೂರಿನ ನಂಜನಗೂಡು ತಾ. ಹೆಡಿಯಾಲದವರು. ನಿನ್ನೆ ಬರ್ತಡೇ ಆಚರಣೆ ವೇಳೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಸುತ್ತಿದ್ರು. ಇದ್ದಕ್ಕಿದ್ದಂತೆ ಕುಸಿದು ಬಿದ್ದ ಆಕಾಶ್‌ರನ್ನು ಕೂಡಲೇ ಸ್ನೇಹಿತರು ಆಸ್ಪತ್ರೆಗೆ ದಾಖಲು ಮಾಡಿದ್ರು. ನಿನ್ನೆಯಿಂದ ನಿರಂತರ ಚಿಕಿತ್ಸೆ ನೀಡಿದ್ರೂ ಕೂಡ ಆಕಾಶ್‌ ಬದುಕುಳಿಯಲಿಲ್ಲ. ಹೃದಯಾಘಾತವಾಗಿದೆ ಎಂದು ವೈದ್ಯರು ದೃಢಪಡಿಸಿದ್ದು, ವಿಧಿಯ ಕ್ರೂರತೆಗೆ ಜನ ಶಾಪ ಹಾಕುತ್ತಿದ್ದಾರೆ.

22ವರ್ಷ ವಯಸ್ಸಿನ ಯುವಕನಿಗೆ ಹೃದಯಾಘಾತ ಅದು ಅಪ್ಪು ಹುಟ್ಟು ಹಬ್ಬ ಸಂದರ್ಭದಲ್ಲೇ ಹೀಗೆ ಆಗಬೇಕಾ..? ಎಂದು ಸ್ನೇಹಿತರು ಕಣ್ಣೀರಿಡುತ್ತಿದ್ದಾರೆ. ಅಪ್ಪು ಸರ್‌ ಕಳೆದುಕೊಂಡ ನೋವೇ ಇನ್ನೂ ಮಾಸಿಲ್ಲ ಈ ನಡುವೆ ಮತ್ತೊಂದು ಘಟನೆ ತುಂಬಾ ದುರಂತ ಎಂದು ಕುಟುಂಬಸ್ಥರು, ಗ್ರಾಮಸ್ಥರು ಆಕಾಶ್‌ ಸ್ನೇಹಿತರು ಕಣ್ಣೀರಾಕುತ್ತಿದ್ದಾರೆ.

Share Post