National

ಮದುವೆಗೆ 6 ತಿಂಗಳು ಸಮಯ ಕೇಳಿದ ಪ್ರಿಯಕರ; ಮನನೊಂದು ಯುವತಿ ಆತ್ಮಹತ್ಯೆ

ಹೈದರಾಬಾದ್‌: ಮದುವೆಗೆ ಇನ್ನೂ ಆರು ತಿಂಗಳು ಸಮಯ ಕೇಳಿದ್ದರಿಂದ ಮನನೊಂದ ಯುವತಿ ಪ್ರಿಯಕರನ ಚಿತ್ರ ಮತ್ತು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯ ಪೆದ್ದಮುಪ್ಪರಮ್ ಗ್ರಾಮದಲ್ಲಿ ನಡೆದಿದೆ. 

ಪೆದ್ದಮುಪ್ಪರಮ್‌ ಗ್ರಾಮದ ಶಾರದಾ ಮತ್ತು ಪೊಲೆಪಲ್ಲಿ ವೆಂಕಣ್ಣ ಎಂಬ ದಂಪತಿಯ ಪುತ್ರಿಯಾದ ಶರಣ್ಯಾ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. 10ನೇ ತರಗತಿಯವರೆಗೆ ಓದಿಕೊಂಡಿದ್ದ ಶರಣ್ಯಾ, ಟೈಲರಿಂಗ್ಆ‌ ಕೆಲಸ ಮಾಡಿಕೊಂಡಿದ್ದಳು.  ಈಕೆಗೆ ಅದೇ ಗ್ರಾಮದ ಕಾರು ಚಾಲಕನೊಬ್ಬನೊಂದಿಗೆ ಪ್ರೀತಿಯಾಗಿತ್ತು. ಆದರೆ ಆತ ಮದುವೆಯಾಗಲು ಆರು ತಿಂಗಳು ಸಮಯ ಕೇಳಿದ್ದಾನೆ. ಇದ್ರಿಂದ ಮನನೊಂದು ಶರಣ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

   ಅಪ್ಪ, ಅಮ್ಮ.. ನಾನು ಮತ್ತೆ ಸೋತಿದ್ದೇನೆ. ಎಲ್ಲರ ಮುಂದೆ ನಾನು ಪ್ರಶ್ನೆಯಾಗಿ ಉಳಿದುಕೊಂಡಿದ್ದೇನೆ. ನಾನು ಮತ್ತೆ ಅವನಿಂದ ಮೋಸ ಹೋಗಿದ್ದೇನೆ. ಈಗ ನನಗೆ ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ. ನಿಮ್ಮ ಮುಂದೆ ಬರಲು ಸಾಧ್ಯವಿಲ್ಲ. ನಾನು ಇನ್ನು ಬದುಕಲು ಇಷ್ಟ ಪಡುವುದಿಲ್ಲ..ಹೀಗಂತ ಶರಣ್ಯಾ ಡೆತ್‌ ನೋಟ್‌ನಲ್ಲಿ ಬರೆದಿಟ್ಟಿದ್ದಾಳೆ. ಜೊತೆಗೆ ತನ್ನ ಪ್ರಿಯಕರನ ಚಿತ್ರವನ್ನೂ ಪುಸ್ತಕದಲ್ಲಿ ಗೀಚಿಟ್ಟಿದ್ದಾಳೆ.

Share Post