National

ಗೋವಾದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು-ಪಕ್ಷೇತರರಿಗೆ ಗಾಳ ಹಾಕಿದ ಬಿಜೆಪಿ

ಗೋವಾ: ಗೋವಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಕಸರತ್ತು ನಡೆಸುತ್ತಿದೆ. 40ವಿಧಾನಸಭಾ ಕ್ಷೇತ್ರಗಳಲ್ಲಿ ಮ್ಯಾಜಿಕ್‌ ನಂಬರ್‌ 21 ಸಾಧಿಸುವಲ್ಲಿ ಬಿಜೆಪಿ ದಾಪುಗಾಲು ಹಾಕುತ್ತಿದೆ. ಈಗಾಗಲೇ 20ಸ್ಥಾನಗಳಲ್ಲಿ ಗೆಲವು ಸಾಧಿಸಿರುವ ಬಿಜೆಪಿ ಅಧಿಕಾರವನನು ಉಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡ್ತಿದೆ. ಇದೀ ಪಕ್ಷೇತರರಿಗೆ ಗಾಳ ಹಾಕಿದ್ದು, ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡ್ತಿದೆ.

ಈಗಾಗಲೇ ಸಿಎಂ ಸಾವಂತ್‌ಗೆ ಪಕ್ಷೇತರರು ಬೆಂಬಲ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಮೂವರು ಪಕ್ಷೇತರರ ಬೆಂಬಲದಿಂದ  ಗೋವಾದಲ್ಲಿ ಅಧಿಕಾರ ಹಿಡಿಯಲು ಕಮಲ ನಾಯಕರು ಪ್ಲಾನ್‌ ಮಾಡಿದ್ದಾರೆ. ಅದರಂತೆ ಗೋವಾ ಸಿಎಂ ಜೊತೆ ಪಕ್ಷೇತರರು ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಬಿಚೋಲಿಯಂನ ಚಂದ್ರಕಾಂತ್‌ ಶೆಟ್ಟಿ, ಕುಡ್ಕರಿಯ ಲಾರೆನ್ಸ್‌, ಕೊರ್ತಾಲಿ ಕ್ಷೇತ್ರದ ಅಂಥೋನಿ ವಾಸ್‌ ಬೆಜೆಪಿಗೆ ಬೆಂಬಲ ನೀಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

Share Post