National

ಅಧಿಕಾರ ಹಿಡಿಯುವ ಅಖಿಲೇಶ್‌ ಯಾದವ್‌ ನಿರೀಕ್ಷೆ ಹುಸಿ: ಎಡವಿದ್ದು ಎಲ್ಲಿ..?

ಉತ್ತರ ಪ್ರದೇಶ:  ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕೊಂಚ ಬಲಿಷ್ಠವಾಗಿದ್ದರೂ ಮತ್ತೆ ಅಧಿಕಾರ ಹಿಡಿಯುವ ಸಮಾಜವಾದಿ ಪಕ್ಷದ ನಿರೀಕ್ಷೆ ಹುಸಿಯಾಗಿದೆ. ಅಖಿಲೇಶ್ ಅವರ ನಾಯಕತ್ವದ ಕೊರತೆ, ಐದು ವರ್ಷಗಳಲ್ಲಿ ಪ್ರಬಲ ಪ್ರತಿಪಕ್ಷ ನಾಯಕರಾಗಿ ತಮ್ಮ ಛಾಪು ತೋರಿಸಲು ಸಾಧ್ಯವಾಗದಿರುವುದು, ಮುಲಾಯಂ ಸಿಂಗ್ ಯಾದವ್ ಅವರ ನಿಷ್ಕ್ರಿಯತೆ, ಆಂತರಿಕ ಕಚ್ಚಾಟ ಮತ್ತು ಚುನಾವಣೆಗೆ ಎರಡು ತಿಂಗಳ ಮೊದಲು ಅಖಿಲೇಶ್ ಪತ್ನಿಯ ಸಹೋದರಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಎಸ್‌ಪಿ ಮತ ಬ್ಯಾಂಕ್‌ಗೆ ಹಾನಿ ಮಾಡಿದೆ.

ಅಲ್ಲದೆ, ಹಲವು ಪಕ್ಷಗಳೊಂದಿಗೆ ಚುನಾವಣೆ ಎದುರಿಸಿದ್ದ ಎಸ್‌ಪಿ ತನ್ನ ಮಿತ್ರಪಕ್ಷಗಳಿಗೆ ಭಾರಿ ಸೀಟುಗಳನ್ನು ಹಂಚಿಕೆ ಮಾಡಿತ್ತು. ಇದೇ ವೇಳೆ ಕಾಂಗ್ರೆಸ್ ಮತ್ತು ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸಿದ್ದರಿಂದ ಆಡಳಿತ ವಿರೋಧಿ ಮತ ಬ್ಯಾಂಕ್ ಛಿದ್ರವಾಯಿತು. ಚುನಾವಣೆಗೂ ಮುನ್ನ ಅಖಿಲೇಶ್ ಸಹಚರರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿ ಸುಗಂಧ ದ್ರವ್ಯಗಳ ವ್ಯಾಪಾರಿ ಪಿಯೂಷ್ ಜೈನ್ ಅವರಿಂದ ಸುಮಾರು 200 ಕೋಟಿ ರೂಪಾಯಿ ನಗದು ಮತ್ತು ಚಿನ್ನ ಪತ್ತೆಯಾಗಿರುವುದು ಸಮಾಜವಾದಿ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿದೆ. ಜೊತೆಗೆ ಅಖಿಲೇಶ್ ಯಾದವ್  ರೈತರು ಮತ್ತು ಇತರ ವರ್ಗದ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವಲ್ಲಿ ವಿಫಲರಾಗಿದ್ದೇ ಅವರ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕನಸಾಗಿಯೇ ಉಳಿದಿದೆ ಎನ್ನಲಾಗುತ್ತಿದೆ.

 

Share Post