Cinema

ನಟ ಪ್ರಭಾಸ್‌ಗೆ ನಾಚಿಕೆ ಜಾಸ್ತಿ:ಸಂದರ್ಶನದಲ್ಲಿ ಪೂಜಾ ಹೆಗ್ಡೆ ಬಿಚ್ಚಿಟ್ಟ ಅಸಲಿ ಸತ್ಯ

ತಮಿಳುನಾಡು:  ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ರಾಧೆ ಶ್ಯಾಮ್‌ ಸಿನಿಮಾ ಸೂಪರ್‌ ಡೂಪರ್‌ ಹಿಟ್‌ ಆಗ್ತಿದೆ. ರಾಧಾ ಕೃಷ್ಣ ನಿರ್ದೇಶನದ ಈ ಬೃಹತ್ ಪ್ಯಾನ್-ಇಂಡಿಯನ್ ಚಿತ್ರವು ಮಾರ್ಚ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ ಮತ್ತು ಈಗಾಗಲೇ ದೇಶಾದ್ಯಂತ ಭಾರೀ ಪ್ರಚಾರಗಳನ್ನು ನಡೆಸುತ್ತಿದೆ. ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಡುವೆ ಕೆಮಿಸ್ಟ್ರಿ ಕೊರತೆಯಿದೆ ಎಂಬ ಸುದ್ದಿಗಳು ಹರಿದಾಡ್ತಿದೆ. ಮುಂಬೈ ಪ್ರಚಾರದಲ್ಲಿ ಇಬ್ಬರ ನಡುವೆ ಕೆಮಿಸ್ಟ್ರಿ ಕೊರತೆ ಎಂಬುದು ಈಗ ಹಾಟ್ ಟಾಪಿಕ್ ಆಗಿದೆ.

ರಾಧೇಶ್ಯಾಮ್ ಚಿತ್ರದ ಶೂಟಿಂಗ್ ವೇಳೆ ಪೂಜಾ ಮತ್ತು ಪ್ರಭಾಸ್ ನಡುವೆ ಗಲಾಟೆ ನಡೆದಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಅಂತಹದ್ದೇನೂ ಇಲ್ಲ ಎಂದು ರಾಧೇಶ್ಯಾಮ್ ಮೇಕರ್ಸ್ ಸ್ಪಷ್ಟಪಡಿಸಿತ್ತು. ಆದರೆ ಇತ್ತೀಚಿನ ಬೆಳವಣಿಗೆ ನೋಡಿದರೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂಬುದು ಸಾಬೀತಾಗೀದೆ. ಇತ್ತೀಚೆಗಷ್ಟೇ ನಡೆದ ಪ್ರೆಸ್ ಮೀಟ್‌ನಲ್ಲಿ ಕೂಡ ಒಬ್ಬರಿಗೊಬ್ಬರು ಮಾತನಾಡದೆ ಕುಳಿತಿದ್ದರು ಇಬ್ಬರ ನಡುವಿನ ಸಿಟ್ಟು ಇನ್ನೂ ಶಮನವಾಗಿಲ್ಲ ಎಂಬ ಅನುಮಾನ ಗಾಢವಾಗಿ ಮೂಡಿದೆ.

ಆದರೆ ತಮಿಳುನಾಡಿನಲ್ಲಿ ನಡೆದ ಪ್ರೀ ರಿಲೀಸ್ ಸಮಾರಂಭದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಮಾಧ್ಯಮದವರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಅಲ್ಲಿಯ ಇಬ್ಬರ ನಡುವಿನ ಇರುವ ಕೆಮಿಸ್ಟ್ರಿ ಕೊರತೆಯನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಅದನ್ನು ತಳ್ಳಿಹಾಕಿದ ಪೂಜಾ ಪ್ರಭಾಸ್‌ ಅವರಿಗೆ ಹೆಚ್ಚು ನಾಚಿಕೆ ಹಾಗಾಗಿ ಅವರೊಂದಿಗೆ ಬೆರೆಯಲು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.  ಒಮ್ಮೆ ಪರಿಚಯವಾದ ನಂತರ ಅವರಷ್ಟು ಕ್ಲೋಸ್‌ ಮತ್ಯಾರೂ ಇರುವುದಿಲ್ಲ ಎಂಬ ಕಾಂಪ್ಲಿಮೆಂಟ್‌ ಕೊಟ್ಟಿದ್ದಾರೆ.  ಇನ್ನೂ ಚಿತ್ರದಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ ಎಂದು ಪ್ರಭಾಸ್ ಹೇಳಿದ್ದಾರೆ. ಒಟ್ಟಿನಲ್ಲಿ ಇಬ್ಬರ ನಡುವಿನ ವಿವಾದಗಳಿಗೆ ಬ್ರೇಕ್‌ ಹಾಕಲು  ಸ್ಪಷ್ಟನೆ ನೀಡುವ ಪ್ರಯತ್ನ ನಡೆದಿದೆ.

Share Post