ಕಲ್ಲುಗಣಿಗಾರಿಕೆಯಲ್ಲಿ ಟಿಪ್ಪರ್ ಮೇಲೆ ಬಂಡೆ ಕುಸಿತ, ಕಾರ್ಮಿಕರು ಸಾವನ್ನಪ್ಪಿರುವ ಶಂಕೆ
ಚಾಮರಾಜನಗರ: ಕಲ್ಲುಗಣಿಗಾರಿಕೆಯಲ್ಲಿ ಕೆಲಸ ಮಾಡ್ತಿದ್ದ ವೇಳೆ ಟಿಪ್ಪರ್ ಲಾರಿ ಮೇಲೆ ಕಲ್ಲು ಬಂಡೆಗಳು ಕುಸಿದುಬಿದ್ದಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾ. ಮಡಹಳ್ಳಿ ಬಳಿಯ ಗುಮ್ಮಕಲ್ಲು ಗುಡ್ಡದಲ್ಲಿ ನಡೆದಿದೆ. ಟಿಪ್ಪರ್ ಲಾರಿಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಕೆಲಸ ಮಾಡ್ತಿದ್ದರು ಎನ್ನಲಾಗಿದೆ. ಬಂಡೆಗಳ ಕೆಳಗೆ ಕಾರ್ಮಿಕರು ಸಿಲುಕಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ರಕ್ಷಣಾ ಕಅರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಅದರೆ ಈ ವರೆಗೆ ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.
ಹಕೀಮ್ ಎಂಬುವವರು ಜಾಗವನ್ನು ಗುತ್ತಿಗೆ ಪಡೆದು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಜಾಗದ ಮಾಲೀಕ ಮೂಲತಃ ಗುಂಡ್ಲುಪೇಟೆ ತಾಲೂಕು ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಎಂಬುವವರಿಗೆ ಸೇರಿದ್ದು, ಇಲಿ ಹಕೀಮ್ ಗಣಿ ನಡೆಸುತ್ತಿರುವುದಾಗಿ ತಿಳಿಸುಬಂದಿದೆ. ಒಂದು ಎಕರೆ ಜಾಗದಲ್ಲಿ ನಡೆಸುತ್ತಿದ್ದ ಗಣಿಗಾರಿಕೆಯಲ್ಲಿ ಕೆಲಸ ಮಾಡುವಾಗ ಬಂಡೆಗಳು ಕುಸಿದು ಬಿದ್ದಿವೆ. ಘಟನಾ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.