Bengaluru

ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಅಸ್ತು: ಬಜೆಟ್‌ನಲ್ಲಿ 11,250ಕೋಟಿ ಅನುದಾನ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರ ಘೋಷಿಸಿದ ಚೊಚ್ಚಲ ಬಜೆಟ್‌ನಲ್ಲಿ ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಹಣ ಮೀಸಲಿಟ್ಟಿದ್ದಾರೆ. ಈಗಾಗಲೇ ಎರಡನೇ ಹಂತದ ಮೆಟ್ರೋ ಕಾಮಗಾರಿ ಪೂರ್ಣ ಹಂತದಲ್ಲಿದ್ದು, ಮೂರನೇ ಹಂತದ ಕಾಮಗಾರಿಗೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ 11,250ಕೋಟಿ ಅನುದಾನದಲ್ಲಿ 37ಕಿ.ಮೀ.ಉದ್ದದ ಮೆಟ್ರೋ ಮಾರ್ಗಕ್ಕೆ ಡಿಪಿಆರ್‌ ಸಲ್ಲಿಸಲಾಗುವುದು. ಸ್ಕೀಮ್‌ ವಿಸ್ತರಣೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮೆಟ್ರೋ ಕಾಮಗಾರಿ ಯೋಜನೆಗಳು

– ಅಂದಾಜು ಮೊತ್ತ 11,250 ಕೋಟಿ ರೂ, 37 ಕಿ.ಮೀ. ಉದ್ದದ ಮೆಟ್ರೋ ಮಾರ್ಗಕ್ಕೆ ಡಿಪಿಆರ್
– 15 ಸಾವಿರ ಕೋಟಿ ವೆಚ್ಚದಲ್ಲಿ ಹೊಸ ಮೆಟ್ರೋ ಮಾರ್ಗಕ್ಕೆ DPR ತಯಾರಿ
– 55 ಕೋಟಿ ವೆಚ್ಚದಲ್ಲಿ ಹೊಸ ಮೆಟ್ರೋ ನಿಲ್ದಾಣಗಳ ಸಂಪರ್ಕ ಕಾಮಗಾರಿ
– ವೈಟ್‌ಫೀಲ್ಡ್‌, ಕೆ.ಆರ್.ಪುರಂ, ಬೈಯ್ಯಪ್ಪನಹಳ್ಳಿ, ಯಶವಂತಪುರ ನಿಲ್ದಾಣ, ಜ್ಞಾನಭಾರತಿ, ಯಲಹಂಕ ರೈಲು ನಿಲ್ದಾಣಕ್ಕೆ ಮೆಟ್ರೋ ರೈಲು ನಿಲ್ದಾಣ ಸಂಪರ್ಕಕ್ಕೆ ಮೆಟ್ರೋ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು
– ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAB)ಕ್ಕೆ ಮೆಟ್ರೋ ಮಾರ್ಗ 2025ರೊಳಗೆ
– ಹೆಬ್ಬಾಳದಿಂದ ಜೆ.ಪಿ.ನಗರದವರೆಗೆ ಮೆಟ್ರೋ ಮಾರ್ಗ ಹಾಗೂ ಹೊಸಳ್ಳಿಯಿಂದ ಕಡಬಗೆರೆವರೆಗೆ ಮೆಟ್ರೋ ಮಾರ್ಗಗಳಿಗೆ ಡಿಪಿಆರ್ ಸಲ್ಲಿಸಲಾಗುವುದು
– ಸರ್ಜಾಪುರದಿಂದ ಅಗರ, ಡೇರಿ ಸರ್ಕಲ್, ಹೆಬ್ಬಾಳ ಮಾರ್ಗಕ್ಕೆ 15 ಸಾವಿರ ಕೋಟಿ ರೂಪಾಯಿಯ ಡಿಪಿಆರ್
– ಬನಶಂಕರಿಯಲ್ಲಿ 45 ಕೋಟಿ ವೆಚ್ಚದ ಸ್ಕೈವಾಕ್ ನಿರ್ಮಾಣ
– ಮೆಟ್ರೋ ನಿಲ್ದಾಣದಿಂದ ರೈಲ್ವೆ ನಿಲ್ದಾಣ ಸಂಪರ್ಕ ಕಾಮಗಾರಿಗೆ 55 ಕೋಟಿ ರೂ. ವೆಚ್ಚ ಘೋಷಣೆ ಮಾಡಲಾಗಿದೆ.

Share Post