ಮೃತ ನವೀನ್ ನಿವಾಸದಲ್ಲಿ ನೀರವ ಮೌನ-3ನೇ ದಿನದ ಕಾರ್ಯ ನರೆವೇರಿಸಿದ ಕುಟುಂಬಸ್ಥರು
ಹಾವೇರಿ: ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಕರ್ನಾಟಕದ ಹಾವೇರಿ ಮೂಲದ ನವೀನ್ ಸಾವನ್ನಪ್ಪಿದ್ದಾರೆ. ನವೀನ್ ಮೃತಪಟ್ಟು ಇಂದಿಗೆ ಮೂರು ದಿನಗಳಾಗಿದ್ದು, ಮನೆಯಲ್ಲಿ ಕಾರ್ಯ ನರೆವೇರಿಸಿದ್ದಾರೆ. ನವೀನ್ ಮನೆಯಲ್ಲಿ ದುಃಖ ಮಡುಗಟ್ಟಿದ್ದು, ಮಗನಿಗಾಗಿ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಈ ನಡುವೆಯೇ ಮೂರನೇ ದಿನದ ಕಾರ್ಯವನ್ನು ನೆರವೇರಿಸಿದ್ದಾರೆ. ನವೀನ್ ಫೋಟೋ ಇಟ್ಟು, ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದ್ದಾರೆ.
ನವೀನ್ ತಂದೆ-ತಾಯಿ ಮಗನ ಪಾರ್ಥಿವ ಶರೀರ ಬರುವಿಕೆಗಾಗಿ ಕಾದು ಕುಳಿತಿದ್ದಾರೆ. ಆದರೆ ಉಕ್ರೇನ್‌ನಲ್ಲಿರುವ ಪರಿಸ್ಥಿತಿ ನೋಡಿದ್ರೆ ಮೃತದೇಹವನ್ನು ರವಾನೆ ಮಾಡುವ ಸಾಧ್ಯತೆ ತೀರಾ ಕಡಿಮೆಯಿದೆ. ಈಗಾಗಲೇ ಉಕ್ರೇನ್‌ನಿಂದ ವಾಪಸಾದ ರಾಯಚೂರು ಮೂಲದ ವಿದ್ಯಾರ್ಥಿ ಲಕ್ಷ್ಮಿನಾರಾಯಣ್ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ. ಮೃತದೇಹ ವಾಪಸ್ ತರುವುದು ಕಷ್ಟಸಾಧ್ಯ ಎಂದಿದ್ದಾರೆ. ಖಾರ್ಕಿವ್‌ನ ಬಂಕರ್‌ಗಳನ್ನು ವಿದ್ಯಾರ್ಥಿಗಳು ಜೀವ ರಕ್ಷಣೆಗಾಗಿ ಕಾದು ಕುಳಿತಿದ್ದಾರೆ. ಕೂಡಲೇ ಅವರನ್ನು ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ.