International

ದೇಶಕ್ಕಾಗಿ ಯುದ್ಧ ಟ್ಯಾಂಕರ್‌ ಹೊತ್ತೊಯ್ದ ರೈತ: ಎದ್ನೋ ಬಿದ್ನೋ ಅಂತ ಟ್ರ್ಯಾಕ್ಟರ್‌ ಹಿಂದೆ ಓಡಿದ ಸೈನಿಕ

ಉಕ್ರೇನ್:‌ ರಷ್ಯಾ ಉಕ್ರೇನ್‌ ಮೇಲಿನ ತನ್ನ ಅಟ್ಟಹಾಸವನ್ನು ನಿಲ್ಲಿಸಿಲ್ಲ. ಯುದ್ಧ ಟ್ಯಾಂಕರ್‌ಗಳ ಮೂಲಕ ಅಟ್ಯಾಕ್‌ ಮುಂದುವರೆಸಿವೆ. ರಷ್ಯಾ ಸೈನಿಕರ ದಾಳಿಗೆ ಉಕ್ರೇನ್‌ ಪ್ರಜೆಗಳು ತಡೆಯೊಡ್ಡುತ್ತಿದ್ದಾರೆ. ರಷ್ಯಾ ಸೈನಿಕರನ್ನು ಹಿಂದೆ ಹೋಗುವಂತೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಿಮ್ಮೆಟ್ಟಿಸುವ ಪ್ರಯತ್ನ ಮಾಡ್ತಿದಾರೆ. ಈ ನಡುವೆ ಉಕ್ರೇನ್‌ ರೈತನೊಬ್ಬ ರಷ್ಯಾ ಯುದ್ಧ ಟ್ಯಾಂಕರ್‌ ಅನ್ನು ಹೊತ್ತೊಯ್ದಿದ್ದಾನೆ.

ರಷ್ಯಾ ಪಡೆ ತಮ್ಮ ದೇಶದ ಮೇಲೆ ದಾಳಿ ಮಾಡಲು ಯುದ್ಧ ಟ್ಯಾಂಕರ್‌ಗಳ ಮೂಲಕ ಬಂದಿವೆ ಎಂಬುದನ್ನರಿತ ಉಕ್ರೇನಿಯನ್ ರೈತ  ಏನಾದರೂ ಮಾಡಬೇಕೆಂದು ಪ್ರಯತ್ನಿಸಿದ್ದಾನೆ. ಕೂಡಲೇ ತನ್ನ ಟ್ರ್ಯಾಕ್ಟರ್ ಸಮೇತ ಯುದ್ಧ ಟ್ಯಾಂಕ್ ಇದ್ದ ಜಾಗಕ್ಕೆ ಬಂದಿದ್ದಾನೆ. ಜಗಳವಾಡುವ ಬದಲು ಯುದ್ಧ ಟ್ಯಾಂಕರ್ ಅನ್ನು ತನ್ನ ಟ್ರ್ಯಾಕ್ಟರ್‌ಗೆ ಜೋಡಿಸಿ ಅಲ್ಲಿಂದ ಜುಯ್‌ ಎಂದು ಟ್ರ್ಯಾಕ್ಟರ್‌ನೊಂದಿಗೆ ತೆರಳಿದ್ದಾನೆ. ಘಟನೆ ಕಂಡ ರಷ್ಯಾ ಸೈನಿಕ ತಕ್ಷಣ ಎಚ್ಚೆತ್ತು ಟ್ರ್ಯಾಕ್ಟರ್ ಹಿಂದೆ ಓಡಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದವರಲ್ಲಿ ಬ್ರಿಟನ್ ಸಂಸದ ಜಾನಿ ಮರ್ಸರ್ ಕೂಡ ಒಬ್ಬರು. ಉಕ್ರೇನಿಯನ್ ರೈತ ರಷ್ಯಾದ ಯುದ್ಧ ಟ್ಯಾಂಕರ್ ಕದ್ದಿರುವುದಾಗಿ ಹೇಳಿಕೊಂಡಿದ್ದಾನೆ. ಈ ವಿಡಿಯೋ ನೋಡಿದವರೆಲ್ಲದೇಶಕ್ಕಾಗಿ ಯುದ್ಧ ಟ್ಯಾಂಕ್ ಕದ್ದ ರೈತ ಎಂದು ಕಮೆಂಟ್ ಮಾಡಿದ್ದಾರೆ.

Share Post