Bengaluru

ನವೀನ್‌ ಪಾರ್ಥಿವ ಶರೀರ ರಾಜ್ಯಕ್ಕೆ ಕರೆತರುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ-ಸಿಎಂ

ಬೆಂಗಳೂರು: ಉಕ್ರೇನ್‌ನಲ್ಲಿ ಶೆಲ್‌ ದಾಳಿಗೆ ಸಾವನ್ನಪ್ಪಿದ ನವೀನ್‌ ಧರಿಸಿರುವ ಬಟ್ಟೆಯ ಫೋಟೋ ಕಳುಹಿಸಿಕೊಟ್ಟಿದ್ದಾರೆ. ಶೆಲ್‌ ದಾಳಿ ಬಳಿಕ ನವೀನ್‌ ಸ್ನೇಹಿತರು ಫೋಟೊ ಕಳುಹಿಸಿದ್ದಾರೆ. ಅದನ್ನು ನಾನು ಈ ಕೂಡಲೇ ವಿದೇಶಾಂಗ ಸಚಿವ ಜೈ ಶಂಕರ್‌ ಅವರೊಂದಿಗೆ ಮಾತನಾಡುತ್ತೇನೆ. ಮತ್ತು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಮಾತನಾಡುತ್ತೇನೆ. ಪಾರ್ಥಿವ ಶರೀರ ಕಳುಹಿಸಿಕೊಡುವ ಬಗ್ಗೆ ಈ ಕೂಡಲೇ ತೀರ್ಮಾನ ತೆಗೆದುಕೊಳ್ಳುವಂತೆ ಮಾತನಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ರು.

ವಿದ್ಯಾರ್ಥಿಗಳ ಸ್ಥಳಾಂತರ ಮಾಡುವ ಬಗ್ಗೆ 26ವಿಮಾನಗಳು ಕಾರ್ಯಾಚರಣೆಗಿಳಿಯಲಿವೆ. ಯುದ್ಧ ಭೀತಿಯಿರುವುದರಿಂದ ಸ್ವಲ್ಪ ಕಷ್ಟವಾಗ್ತಿದೆ. ಸರ್ಕಾರ ಉಕ್ರೇನ್‌ನೊಂದಿಗೆ ಮಾತನಾಡಿ ಅಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ರೈಲ್ವೆ ಸ್ಟೇಷನ್‌ ಮುಖಾಂತರ ವಿದ್ಯಾರ್ಥಿಗಳನ್ನು ಹೊರತರುವ ಪ್ರಯತ್ನ ನಡೆಯುತ್ತಿದೆ.
ನವೀನ್‌ ಜೊತೆಗಿದ್ದ ಕನ್ನಡದ ಸ್ನೇಹಿತನ ವಿಚಾರದ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಒಬ್ಬರು ಜೊತೆಗಿದ್ದ ಅಂತಿದಾರೆ, ಇನ್ನೊಬ್ಬರು ಇಲ್ಲ ಅಂತಿದಾರೆ ಅದನ್ನು ಪರಿಶೀಲನೆ ಮಾಡ್ತಿದ್ದೇವೆ. ನವೀನ್‌ ಪೋಷಕರು ಈಗಾಗಲೇ ದುಃಖದಲ್ಲಿದ್ದಾರೆ. ಅವರಿಗೆ ಮಗನ ಪಾರ್ಥಿವ ಶರೀರವನ್ನು ತಲುಪಿಸುವ ಪ್ರಯತ್ನ ಮಾಡ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ರು.

ನವೀನ್‌ ಕುಟುಂಬಸ್ಥರಿಗೆ ಪರಿಹಾರ ಕೊಟ್ಟೇ ಕೋಡ್ತೀವಿ. ಮೊದಲು ಅಲ್ಲಿರುವ ವಿದ್ಯಾರ್ಥಿಗಳನ್ನು ವಾಪಸ್‌ ಕರೆಸಿಕೊಂಡ ಬಳಿಕ ಮುಂದಿನ ತೀರ್ಮಾನಗಳನ್ನು ಮಾಡುವುದಾಗಿ ಸಿಎಂ ಹೇಳಿದ್ರು.

ಯುದ್ಧದಲ್ಲಿ ಸಾವನ್ನಪ್ಪಿದವರು ವಿಚಾರವನ್ನು ಇಟ್ಕೊಂಡು ಕಾಂಗ್ರೆಸ್‌ ರಾಜಕಾರಣ ಮಾಡುತ್ತೆ ಅಂದ್ರೆ ಇನ್ನೆಷ್ಟು ಕೀಳಾಗಿ ಯೋಚನೆ ಮಾಡ್ತಾರೆ ಅವ್ರು. ಹಿಂದೆ ನಡೆದ ಯುದ್ಧದಲ್ಲಿ ಒಬ್ಬರನ್ನೂ ಕರೆತರುವ ಪ್ರಯತ್ನ ಅವರು ಮಾಡಿಲ್ಲ. ನಾವು ಈಗಾಗಲೇ ರಕ್ಷಣಾ ಕಾರ್ಯ ಮಾಡ್ತಿದೇವೆ, ಸಚಿವರು ಇದಾರೆ, ಎಂಬಸ್ಸಿ ಜೊತೆಗಿದೆ. ಕಾಂಗ್ರೆಸ್‌ನವರಿಗೆ ರಾಜಕೀಯ ಮುಖ್ಯ ಅಲ್ಲಿನ ಜನರ ಸಂಕಷ್ಟ ಅಲ್ಲ ಎಂದು ಸಿಎಂ ಬೊಮ್ಮಾಯಿ ಕಿಡಿ ಕಾರಿದ್ರು.

Share Post