RUSSIA-UKRAINE WAR; ಉಕ್ರೇನ್ ನಾಗರಿಕರಿಗೆ ಹೆಚ್ಚಾದ ಭೀತಿ; ಪಕ್ಕದ ದೇಶಗಳಿಗೆ 6.80 ಲಕ್ಷ ಮಂದಿ ವಲಸೆ
ಕೀವ್: ಉಕ್ರೇನ್ ಮೇಲೆ ರಷ್ಯಾ ನಿರಂತರ ದಾಳಿ ನಡೆಸುತ್ತಿರುವುದರಿಂದ ಉಕ್ರೇನ್ ಪ್ರಜೆಗಳು ಭಯಭೀತರಾಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಲಕ್ಷಾಂತರ ಉಕ್ರೇನಿಗರು ದೇಶ ಬಿಟ್ಟು ಪಲಾಯನ ಮಾಡುತ್ತಿದ್ದಾರೆ. ಇದುವರೆಗೆ ಸುಮಾರು 6 ಲಕ್ಷ 80 ಸಾವಿರ ಮಂದಿ ದೇಶ ಬಿಟ್ಟು ವಲಸೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್ ಸುತ್ತಮುತ್ತಲ ದೇಶಗಳಿಗೆ ಉಕ್ರೇನಿಗರು ಪರಾರಿಯಾಗುತ್ತಿದ್ದಾರೆ. ರಷ್ಯಾ ದಾಳಿಯಿಂದ ಜೀವ ಉಳಿಸಿಕೊಳ್ಳಲು ಉಕ್ರೇನಿಗರು ಹೀಗೆ ಪಲಾಯನ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ವೊಲ್ದೋವಾಗೆ 40 ಸಾವಿರ, ರೊಮೇನಿಯಾಗೆ 34 ಸಾವಿರ, ಸ್ಲೊವಾಕಿಯಾಗೆ 30 ಸಾವಿರ, ಹಂಗೇರಿಗೆ 40 ಸಾವಿರ ಹಾಗೂ ಪೋಲೆಂಡ್ಗೆ 2 ಲಕ್ಷಕ್ಕೂ ಅಧಿಕ ಮಂದಿ ವಲಸೆ ಹೋಗಿದ್ದಾರೆ.