Districts

ನಮ್ಮ ಮಕ್ಕಳನ್ನು ಕೂಡಲೇ ಕರೆತನ್ನಿ, ಇಲ್ಲವಾದಲ್ಲಿ ನಾವು ನೇಣಿಗೆ ಶರಣಾಗಬೇಕಾಗುತ್ತದೆ-ನವೀನ್‌ ಸ್ನೇಹಿತನ ತಂದೆ ಮನವಿ

ಹಾವೇರಿ: ಉಕ್ರೇನ್‌ನಲ್ಲಿ ಸಿಲುಕಿರುವ ನಮ್ಮ ಮಕ್ಕಳನ್ನು ಕೂಡಲೇ ಭಾರತಕ್ಕೆ ಕರೆತನ್ನಿ, ಇಂದು ನವೀನ್‌ ನಾಳೆ ನಮ್ಮ ಮಕ್ಕಳ ಕತೆ ಕೂಡ ಹೀಗೆ ಆದ್ರೆ ನಾವು ನೇಣು ಹಾಕಿಕೊಳ್ಳುವುದು ಗ್ಯಾರೆಂಟಿ.. ನಮಗೆ ಇರುವುದು ಒಬ್ಬನೇ ಮಗ ಅಮಿತ್‌ ಹಾಗೂ ನವೀನ್‌ ಇಬ್ಬರೂ ಸ್ನೇಹಿತತರು ಇಂದು ಅವರ ಸ್ಥಿತಿ ನೋಡಲು ಆಗ್ತಿಲ್ಲ. ಸರ್ಕಾರ ಕೂಡಲೇ ಇತರ ಮಕ್ಕಳು ಸಾಯುವ ಮುನ್ನ ಕರೆತರಬೇಕು ಎಂದು ನವೀನ್‌ ಸ್ನೇಹಿತ ಅಮಿತ್‌ ತಂದೆ ವೆಂಕಟೇಶ್ ಆಗ್ರಹ ಮಾಡಿದ್ದಾರೆ.

ಯುದ್ಧವನ್ನು ನಿಲ್ಲಿಸುವ ಸಾಮರ್ಥ್ಯ ಪ್ರಧಾನಿ ಮೋದಿಗಿದೆ. ಅಂತಹ ತಾಕತ್ತು ಮೋದಿಯವರಿಗಿದೆ. ಯಾರೊಂದಿಗಾದ್ರೂ ಮಾತಾಡಿ ಹೇಗಾದ್ರೂ ಮಾಡಿ ಆದರೆ ನಮ್ಮ ಮಕ್ಕಳು ನಮ್ಮ ಮನೆಗೆ ಬರಬೇಕು ಎಂದು ನವೀನ್‌ ಸ್ನೇಹಿತ ಅಮಿತ್‌ ತಂದೆ ವೆಂಕಟೇಶ್‌ ಮನವಿ ಮಾಡಿದ್ದಾರೆ. ಇಂಡಿಯನ್‌ ಎಂಬಸ್ಸಿ ಸರಿಯಾದ ಮಾಹಿತಿ ನೀಡ್ತಿಲ್ಲ. ಅವರಿಗೆ ತಿನ್ನಲು, ಕುಡಿಯಲು ನೀರು ಆಹಾರದ ಕೊರತೆ ಉಂಟಾಗಿದೆ. ಮೈನಸ್‌ 1 ಡಿಗ್ರಿ ಚಳಿಯಿದೆ. ಅಂತಹ ವಾತಾವರಣದಲ್ಲಿ ಮಕ್ಕಳು ಹೇಗಿರ್ತಾರೆ. ಭಾರತ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು.

ಇಲ್ಲಿ ವಿದ್ಯಾಭ್ಯಾಸ ಮಾಡಿಸಲು ಕೋಟಿ ಕೋಟಿ ಡೊನೇಷನ್‌ ಕೇಳ್ತಿದಾರೆ. ಮಕ್ಕಳು ಆಸೆ ಪಟ್ಟ ವಿದ್ಯಾಭ್ಯಾಸ ನೀಡಲು ಆಗ್ಲಿಲ್ಲ ಅಂದ್ರೆ ಹೆತ್ತವರಿದ್ದು ಏನ್‌ ಮಾಡಬೇಕು. ಅಲ್ಲಿ ಕಡಿಮೆ ಫೀಸ್‌ ಇರುವುದರಿಂದ ಅಲ್ಲಿಗೆ ಹಾಕಿದ್ದೇವೆ. ಇಲ್ಲಿ ಹಣಬಾಕರು ಎಜುಕೇಷನ್‌ ದಂಧೆ ನಡೆಸುತ್ತಿದ್ದಾರೆ. ಹಾಗಾಗಿ ಮಕ್ಕಳನ್ನು ಬೇರೆಡೆಗೆ ಕಳುಹಿಸಿ ಇಂದು ಅವರು ಪ್ರಾಣ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಯುದ್ಧ ಘೋಷಣೆ ಬೆನ್ನಲ್ಲೇ ಸರ್ಕಾರ ವಿಮಾನ ದರ ಏರಿಸಿದೆ ಒಮ್ಮೆಲೆ ಲಕ್ಷ ಲಕ್ಷ ಟಿಕೆಟ್‌ ದರ ಮಾಡಿದ್ರೆ ನಾವು ಎಲ್ಲಿಂದ ತರುವುದು. ಮೊದಲು ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತನ್ನಿ ಎಂದು ಅಮಿತ್‌ ತಂದೆ ಮನವಿ ಮಾಡಿದ್ದಾರೆ.

Share Post