ಐದು ದಿನ ಕಳೆದರೂ ನಮ್ಮನ್ನು ಏನೂ ಮಾಡಲಾಗಲಿಲ್ಲ-ಉಕ್ರೇನ್ ರಕ್ಷಣಾ ಮಂತ್ರಿ
ಉಕ್ರೇನ್:ರಷ್ಯಾ ಸೇನೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಉಕ್ರೇನ್ ಮೇಲೆ ಅಟ್ಯಾಕ್ ಮಾಡ್ತಿವೆ, ಆದರೆ ಉಕ್ರೇನ್ ಮಾತ್ರ ಯಾವುದಕ್ಕೂ ಕುಗ್ಗದೆ ರಷ್ಯಾದ ವಿರುದ್ಧದ ಹೋರಾಟದಲ್ಲಿ ಕಳೆದ 85 ಗಂಟೆಗಳಿಂದ ರಷ್ಯಾದ ಸೈನಿಕರಿಗೆ ಸೆಡ್ಡು ಹೊಡೆಯುತ್ತಿವೆ. ಸಣ್ಣ ದೇಶವಾದ ಉಕ್ರೇನ್‌ಗೆ ಇದು ತುಂಬಾ ಮಾನಸಿಕವಾಗಿ ಉತ್ಸಾಹಭರಿತವಾಗಿ ಹೋರಾಡುತ್ತಿದೆ. ರಷ್ಯಾದ ಪಡೆಯ ಶಸ್ತ್ರಾಸ್ತ್ರಗಳಿಗೆ ಹೋಲಿಸಿದರೆ ಉಕ್ರೇನ್ ಶಸ್ತ್ರಾಸ್ತ್ರ ತುಂಬಾ ಕಡಿಮೆ. ಇಡೀ ಜಗತ್ತು ಕಾಡುತ್ತಿರುವುದು ಇದೇ ಆಶ್ಚರ್ಯದ ಸಂಗತಿ. ಯಾವುದೇ ದೇಶವು ಅವರಿಗೆ ಸಹಾಯ ಮಾಡದೇ ಇದ್ದರೂ ಉಕ್ರೇನ್ ತನ್ನ ಸ್ಥೈರ್ಯವನ್ನು ಕಳೆದುಕೊಳ್ಳದೆ ರಷ್ಯಾದ ಶಕ್ತಿಯನ್ನು ನಿರ್ಬಂಧಿಸುತ್ತಿದೆ. ರಷ್ಯಾ ನಡೆಸಿದ ಪ್ರತಿಯೊಂದು ದಾಳಿಯನ್ನು ಯುಕ್ರೇನ್ ಸಮರ್ಥವಾಗಿ ಹಿಮ್ಮೆಟ್ಟಿಸುತ್ತಿದೆ.
ಈ ಉತ್ಸಾಹದ ಮೂಡ್‌ನಲ್ಲಿರುವ ಉಕ್ರೇನ್ ಅಧ್ಯಕ್ಷ ಹಾಗೂ ರಕ್ಷಣಾ ಸಚಿವರು ಸೆಲ್ಫಿ ತೆಗೆದುಕೊಂಡು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. “ಐದು ದಿನಗಳು .. ಅಂದರೆ ನಾವು 85 ಗಂಟೆಗಳಿಂದ ನಾವು ರಷ್ಯಾ ವಿರುದ್ಧ ಹೋರಾಡುತ್ತಿದ್ದೇವೆ..! ಐದು ದಿನಗಳು ಕಳೆದರೂ ರಷ್ಯಾ ನಮ್ಮನ್ನು ಏನೂ ಮಾಡಲಾಗುತ್ತಿಲ್ಲ! ನಮ್ಮ ಡಿಫೆನ್ಸ್ ಮುರಿಯುವುದು ನಿಮ್ಮಂದ ಸಾಧ್ಯವಾಗಲ್ಲ..! ನಮ್ಮ ರಾಜಧಾನಿ ಎಂದಿಗೂ ನಿಮ್ಮ ಕೈ ವಶವಾಗುವುದಿಲ್ಲ ಅದಕ್ಕೆ ನಾವು ಆಸ್ಪದ ಕೊಡುವುದಿಲ್ಲ..! ನಾವು ಈಗಾಗಲೇ ಯಶಸ್ಸಿನ ಹತ್ತಿರ ಇದ್ದೇವೆ..ನೀವು ನಿಮ್ಮ ದೇಶಕ್ಕೆ ಹೋದರೆ ಉತ್ತಮ. ಇನ್ನೂ ಸಮಯ ಇದೆ ನಿಮ್ಮ ದೇಶಕ್ಕೆ ಹೊರಟು ಹೋಗ ಎಂದು ಉಕ್ರೇನ್ ರಕ್ಷಣಾ ಸಚಿವರು ರಷ್ಯಾವನ್ನು ಉದ್ದೇಶಿಸಿ ಹೇಳಿದ್ರು.