Bengaluru

“ಮಹಾ ಶಿವರಾತ್ರಿ” ಹಬ್ಬದ ಪ್ರಯುಕ್ತ BBMP ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧ

ಬೆಂಗಳೂರು:  ದಿನಾಂಕ 01.03.2022ರ ಮಂಗಳವಾರ “ಮಹಾ ಶಿವರಾತ್ರಿ” ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ಆದೇಶ ಹೊರಡಿಸಿದ್ದಾರೆ.

ಈ ಮೂಲಕ ಮಾಂಸ ಪ್ರಿಯರಿಗೆ ನಾಳೆ ಒಂದು ದಿನ ಬ್ರೇಕ್‌ ಬಿದ್ದಿದೆ. ಸಾಮಾನ್ಯವಾಗಿ ಹಬ್ಬದ ದಿನ ಮಾಂಸದ ಊಟ ಅಷ್ಟಾಗಿ ಸೇವನೆ ಮಾಡದಿದ್ರೂ ಹಬ್ಬ ಆಚರಿಸದ, ಬೇರೆ ಧರ್ಮದವರಿಗೆ, ನಾಸ್ತಿಕರಿಗೆ ನಾನ್‌ ವೆಜ್‌ ತಿನ್ನಲು ಅವಕಾಶ ಇಲ್ಲದಂತಾಗಿದೆ. ಬೆಂಗಳೂರಿನಾದ್ಯಂತ ಬಿಬಿಎಂಪಿ ಎಲ್ಲಾ ವಲಯಗಳಲ್ಲೂ ನಾಳೆ ಪ್ರಾಣಿ ವಧೆಗೆ ಬ್ರೇಕ್‌ ಬಿದ್ದಿದೆ.

 

 

Share Post