Districts

2ನೇ ದಿನಕ್ಕೆ ಕಾಲಿಟ್ಟ ಮೇಕೆದಾಟು ಪಾದಯಾತ್ರೆ- ಉರಿ ಬಿಸಿಲಿನಲ್ಲಿ ಕಾಂಗ್ರೆಸ್‌ ನಾಯಕರ ನಡಿಗೆ

ರಾಮನಗರ: ಕಾಂಗ್ರೆಸ್ವ ನಾಯಕರ ಮೇಕೆದಾಟು ಪಾದಯಾತ್ರೆ 2.0ಎರಡನೇ ದಿನಕ್ಕೆ ಕಾಲಿಟ್ಟಿದೆ. ಉರಿ ಉರಿ ಬಿಸಿಲಿನಲ್ಲಿ ಕಾಂಗ್ರೆಸ್‌ ನಾಯಕರು ಹೆಜ್ಜೆ ಹಾಕುತ್ತಿದ್ದಾರೆ. ಇಂದು ಬಿಡದಿಯಿಂದ ಕೆಂಗೇರಿವರೆಗೂ ಪಾದಯಾತ್ರೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಡಿಸಿಎಂ ದಾ. ಜಿ. ಪರಮೇಶ್ವರ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತಿತರ ಮುಖಂಡರು ಬಿಡದಿಯಲ್ಲಿ ಬೃಹತ್ ಪುಷ್ಪಮಾಲೆ ಹಾಕುವ ಮೂಲಕ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಜನ್ಮದಿನ ಆಚರಿಸಿದರು.

ಈ ವೇಳೆ ಪಾದಯಾತ್ರೆಗೆ ಬಿಡದಿ ಮಹಿಳೆಯರು ಕುಂಭಕಳಸದ ಮೂಲಕ ಶುಭಕೋರಿದ್ರು. ನೂರಾರು ಕಳಸಗಳನ್ನು ಹೊತ್ತುಕೊಂಡು ಬಂದು ಪಾದಯಾತ್ರೆ ಯಶಸ್ವಿಯಾಗಲೆಂದು ಹಾರೈಸಿದ್ರು.  ಬಳಿಕ  ಕೆಂಗೇರಿ ಕಡೆ ಹೊರಟ ಮೇಕೆದಾಟು ಪಾದಯಾತ್ರೆಯಲ್ಲಿ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ, ಬಾಲಕೃಷ್ಣ, ಸಲೀಂ ಅಹ್ಮದ್, ವೆಂಕಟರಮಣಪ್ಪ, ಧ್ರುವನಾರಾಯಣ್ ಮತ್ತಿತರರು ಪಾಲ್ಗೊಂಡಿದ್ರು. ದಾರಿಯುದ್ದಕ್ಕೂ ಕಾಂಗ್ರೆಸ್‌ ಪರ ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್‌ ಕಾರ್ಯಕರ್ತರು ಸಾಥ್‌ ನೀಡಿದ್ರು.

ಬೈಕ್‌ ಮೂಲಕ ರ್ಯಾಲಿ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ತರಬೇಕೆಂದು ಘೋಷಣೆ ಕೂಗುತ್ತಿದ್ದಾರೆ.‌

Share Post