Districts

ಶಿವಮೊಗ್ಗದಲ್ಲಿ ಮುಂದುವರೆದ ಹಿಜಾಬ್‌ ಸಂಘರ್ಷ: ಕಾಲೇಜು ಬಳಿ ವಿದ್ಯಾರ್ಥಿನಿಯರ ಪ್ರತಿಭಟನೆ

ಶಿವಮೊಗ್ಗ: ಮಲೆನಾಡಿನಲ್ಲಿ ಹಿಜಾಬ್‌ ವಿವಾದ ಬೂದಿ ಮುಚ್ಚಿದ ಕೆಂಡದಂತಾಗಿದೆ. ನಿನ್ನೆವರೆಗೂ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆ ಶಾಂತಿ ಕಾಪಾಡುವ ಸಲುವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇಂದಿನಿಂದ ಮತ್ತೆ ಕಾಲೇಜುಗಳು ಓಪನ್‌ ಆಗಿವೆ. ದ್ವಿತೀಯ ಪಿಯುಸಿ ಪೂರ್ವ ಸಿದ್ಧತೆ ಪರೀಕ್ಷೆ ಕೂಡ ನಡೆಯುತ್ತಿವೆ. ಈ ಹಿನ್ನೆಲೆ ಇಂದು ಹಿಜಾಬ್‌ ಧರಿಸಿಸ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ್ದಾರೆ. ಆದರೆ ಕಾಳೇಜು ಆಡಳಿತ ಮಂಡಳಿ ಮಾತ್ರ ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಿದೆ.

ಹಿಜಾಬ್‌ ತೆರೆದು ಕಾಲೇಜಿನ ಒಳ ಹೋಗುವಂತೆ ಡಿವಿಎಸ್‌ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ಅದಕ್ಕೆ ನಿರಾಕರಿಸಿದ ವಿದ್ಯಾರ್ಥಿನಿಯರು ಕಅಲೇಜಿನ ಹೊರಗಡೆ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ವಿದ್ಯಾರ್ಥಿನಿಯರು ಪೋಷಕರು ಕಾಲೇಕು ಬಳಿ ಬಂದು ಇನ್ನೂ ನ್ಯಾಯಾಲಯದಿಂದ ಯಾವುದೇ ಆದೇಶ ಬಂದಿಲ್ಲ. ಅದುವರೆಗೂ ಹಿಜಾಬ್‌ ಧರಿಸಿ ಕಾಳೇಜಿಗೆ ಬರಲು ಅನುಮತಿ ನೀಡಬೇಕು. ಇಂದು ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಬೆರಯಲು ಕಾಲೇಜು ಆಡಲೀತ ಮಂಡಳಿ ಅನುಮತಿ ಮಾಡಿಕೊಡಬೇಕೆಂದು ಪೋಷಕರು ಮನವಿ ಮಾಡಿಕೊಂಡಿದ್ದಾರೆ.  ಆದರೆ ಹಿಜಾಬ್‌ ಧರಿಸಿ ಕಾಲೇಜು ಒಳಗಡೆ ಅನುಮತಿ ಇಲ್ಲವೆಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.

ಇತ್ತ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದ ರಿಟ್‌ ಅರ್ಜಿ ವಿಚಾರಣೆ ಅಂತ್ಯವಾಗಿದ್ದು. ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ. ನ್ಯಾಯಾಲಯದ ತೀರ್ಪಿಗಾಗಿ ಸರ್ಕಾರ, ವಿದ್ಯಾರ್ಥಿಗಳು, ಪೋಷಕರು ಕಾದು ಕುಳಿತಿದ್ದಾರೆ.

Share Post