International

RUSSIA-UKRAINE WAR: ಉಕ್ರೇನ್‌ಗೆ 2626 ಕೋಟಿ ರೂ.ನೆರವು ಘೋಷಿಸಿದ ಅಮೆರಿಕ

ವಾಷಿಂಗ್ಟನ್: ಉಕ್ರೇನ್‌ಗೆ ಅಮೆರಿಕ ನೆರವು ನೀಡಲು ಮುಂದಾಗಿ ರಕ್ಷಣಾ ಉಪಕರಣಗಳನ್ನು ಖರೀದಿ ಮಾಡುವುದಕ್ಕೆ ಹಾಗೂ ಮಿಲಿಟರಿ ತರಬೇತಿಗಾಗಿ ಅಮೆರಿಕ 2626 ಕೋಟಿ ರೂಪಾಯಿ ನೆರವು ಘೋಷಿಸಲಾಗಿದೆ. ತಕ್ಷಣವೇ ಈ ನೆರವು ನೀಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆದೇಶ ಹೊರಡಿಸಿದ್ದಾರೆ.

ಅಮೆರಿಕ ಕೆಲವು ತಿಂಗಳಿಂದ ಉಕ್ರೇನ್‌ಗೆ ನೆರವು ನೀಡುತ್ತಾ ಬಂದಿದೆ. ಈ ಹಿಂದೆ ಕೂಡಾ 4,503 ಕೋಟಿ ರೂಪಾಯಿ ನೆರವು ನೀಡಿತ್ತು. ಇದೀಗ ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಘೋಷಣೆ ಮಾಡಿದೆ. ಕಳೆದ ಮೂರು ದಿನಗಳಿಂದ ರಷ್ಯಾ ಉಕ್ರೇನ್‌ನಲ್ಲಿ ಭಾರಿ ಹಾನಿ ಮಾಡಿದೆ. ನೆರವು ನೀಡಬೇಕಿದ್ದು ಅಮೆರಿಕ ಸುಮ್ಮನಿತ್ತು. ಇದೀಗ ಅಮೆರಿಕ ಹಣಕಾಸಿನ ನೆರವು ನೀಡಲು ತೀರ್ಮಾನ ಮಾಡಿದೆ. ಉಕ್ರೇನ್‌ ಶಸ್ತ್ರಾಸ್ತ್ರಗಳ ನೆರವು ಕೋರಿತ್ತು. ರಷ್ಯಾ ಜೊತೆ ನಾವು ಯುದ್ಧ ಮುಂದುವರೆಸುತ್ತೇವೆ. ನಮಗೆ ಬೆಂಬಲ ನೀಡುವುದಿದ್ದರೆ ಶಸ್ತ್ರಾಸ್ತ್ರಗಳನ್ನು ನೀಡಿ ಎಂದು ಉಕ್ರೇನ್‌ ಅಧ್ಯಕ್ಷರು ಮನವಿ ಮಾಡಿದ್ದರು. ಈ ಬೆನ್ನೆಲ್ಲೇ ಅಮೆರಿಕ ಹಣಕಾಸಿನ ನೆರವು ನೀಡಲು ಮುಂದಾಗಿದೆ.

Share Post