International

RUSSIA_UKRAINE WAR; 2800 ರಷ್ಯಾ ಸೈನಿಕರ ಹತ್ಯೆ; 80 ಯುದ್ಧ ಟ್ಯಾಂಕರ್‌ ಧ್ವಂಸ

ಕೀವ್: ರಷ್ಯಾ ಕೀವ್‌ ನಗರವನ್ನು ಆಕ್ರಮಿಸುತ್ತಿದೆ. ವಸತಿ ಕಟ್ಟಡಗಳ ಮೇಲೂ ದಾಳಿ ನಡೆಸುತ್ತಿದೆ. ಈ ಮಧ್ಯೆ ಉಕ್ರೇನ್‌ ಕೂಡಾ ಪ್ರತಿ ದಾಳಿ ನಡೆಸುತ್ತಿದೆ. ಇದರಲ್ಲಿ 2800 ರಷ್ಯಾ ಸೈನಿಕರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಉಕ್ರೇನ್‌ ಅಧಿಕೃತ ಹೇಳಿಕೆ ನೀಡಿದೆ. 

  2800 ರಷ್ಯಾ ಸೈನಿಕರನ್ನು ಹೊಡೆದುರುಳಿಸಿದ್ದೇವೆ. ಜೊತೆಗೆ ರಷ್ಯಾದ 80 ಯುದ್ಧ ಟ್ಯಾಂಕರ್​ಗಳನ್ನು ಧ್ವಂಸ ಮಾಡಲಾಗಿದೆ. 516 ಶಸ್ತ್ರಸಜ್ಜಿತ ಯುದ್ಧ ವಾಹನಗಳು, 10 ವಿಮಾನಗಳು ಮತ್ತು ಏಳು ಹೆಲಿಕಾಪ್ಟರ್‌ಗಳನ್ನು ಧ್ವಂಸ ಮಾಡಲಾಗಿದೆ ಎಂದು ಉಕ್ರೇನ್ ಉಪ ರಕ್ಷಣಾ ಸಚಿವ ಹನ್ನಾ ಮಲ್ಯಾರ್ ಮಾಹಿತಿ ನೀಡಿದ್ದಾರೆ.

Share Post