ನನ್ನ ಸ್ಥಳಾಂತರ ಮಾಡುವುದಲ್ಲ, ನಿಮ್ಮ ಕೈಲಾದ್ರೆ ಉಕ್ರೇನ್ ರಕ್ಷಿಸಿ-ಅಮೆರಿಕಾಗೆ ಜೆಲೆನ್ ಸ್ಕಿ ಸವಾಲು
ಉಕ್ರೇನ್: “ನನ್ನನ್ನುಹಾಗೂ ನನ್ನ ಕುಟುಂಬವನ್ನು ಉಕ್ರೇನ್ನಿಂದ ತಪ್ಪಿಸುವುದಲ್ಲ, ಸಾಧ್ಯ ಆದ್ರೆ ಉಕ್ರೇನ್ ಅನ್ನು ರಷ್ಯಾ ದಾಳಿಯಿಂದ ಕಾಪಾಡಿ ಎಂದು ಅಮೆರಿಕಾ ಅಧ್ಯಕ್ಷ ಬೈಡೆನ್ಗೆ ಸವಾಲ್ ಎಸೆದರು. ಝೆಲೆನ್ಸ್ಕಿ ಅವರನ್ನು ಉಕ್ರೇನ್ನಿಂದ ಪಾರು ಮಾಡುವ ಅಮೆರಿಕಾ ಪ್ರಸ್ತಾಪವನ್ನು ತಿರಸ್ಕಾರ ಮಾಡಿದ್ದಾರೆ. ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರುವುದಲ್ಲ. ಮೊದಲು ನಮಗೆ ಸಪೋರ್ಟ್ ಮಾಡಿ ಯುದ್ಧ ಪ್ರಾರಂಭವಾದ ನಂತರ ಶಸ್ತ್ರಾಸ್ತ್ರಗಳು ಮತ್ತು ನ್ಯಾಟೋ ಪಡೆಗಳನ್ನು ವಾಪಸ್ ಕರೆಸಿಕೊಂಡು ನಮ್ಮನ್ನು ಒಂಟಿಗಾಗಿ ಮಾಡಿದ್ದೀರಿ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ. ನಮಗೆ ಆಫರ್ ನೀಡೋದಲ್ಲ ಆಯುಧಗಳನ್ನು ನೀಡಿ ಎಂದು ಆದೇಶಿಸಿದ್ದಾರೆ.
ದೇಶದ ಜನರಿಗಿಂತ ನನ್ನ ಜೀವ ಮುಖ್ಯವಲ್ಲ ಎಂದು ಪುನರುಚ್ಚರಿಸಿದರು. ನಿನ್ನೆಯಿಂದ ಕೀವ್ನಲ್ಲಿ ಅಟ್ಯಾಕ್ ಮಾಡ್ತಿರುವ ರಷ್ಯಾ ಪಡೆಗಳು ಯಾವುದೇ ಕ್ಷಣದಲ್ಲಾದರೂ ನಗರವನ್ನು ವಶಪಡಿಸಿಕೊಳ್ಳಬಹುದು. ಹಾಗಾಗಿ ಝೆಲೆನ್ಸ್ಕಿಯ ಸಾವನ್ನು ಶಂಕಿಸಿ ದೇಶವನ್ನು ದಾಟಲು ವಿಶೇಷ ಪಡೆಗಳನ್ನು ಕಳುಹಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಹೇಳಿದೆ. ಅವರನ್ನು ಸುರಕ್ಷಿತವಾಗಿ ಯುರೋಪಿನ ಕೆಲವು ಭಾಗಕ್ಕೆ ಸ್ಥಳಾಂತರಿಸುವುದಾಗಿ ಹೇಳಿದರು. ಈ ಪ್ರಸ್ತಾಪವನ್ನು ಝೆಲೆನ್ ಸ್ಕಿ ತಿಸ್ಕರಿಸಿ ಕೀವ್ನಲ್ಲಿ ಉಳಿಯಲು ನಿರ್ಧರಿಸಿದರು.
ಉಕ್ರೇನ್ಗೆ ಬೆಂಬಲವಾಗಿ ನಿಂತು ಹೋರಾಡುವಂತೆ ಜೆಲೆನ್ಸ್ ಸ್ಕಿ ಮನವಿಯನ್ನು ಅಮೆರಿಕಾ ನಿರ್ಲಕ್ಷಿಸಿದೆ. ಬದಲಿಗೆ ಯುದ್ಧದ ಬಳಿಕ ನೆರವಿನ ಹಸ್ತ ನೀಡಲು ನಿರ್ಧಾರ ಮಾಡಿದೆ. ರಕ್ಷಣಾ ಶಸ್ತ್ರಾಸ್ತ್ರಗಳು, ಸೇವೆಗಳು, ಮಿಲಿಟರಿ ಶಿಕ್ಷಣ ಮತ್ತು ತರಬೇತಿಗಾಗಿ ಉಕ್ರೇನ್ಗೆ ಭಾರಿ ಮೊತ್ತದ ನೆರವು ಘೋಷಿಸಲಾಯಿತು. $ 550 ಮಿಲಿಯನ್ ಡಾಲರ್ ಆರ್ಥಿಕ ನೆರವಿನ ಮೆಮೊರಂಡಮ್ಗೆ ಬೈಡೆನ್ ಸಹಿ ಹಾಕಿದ್ದಾರೆ.