ದುಷ್ಕರ್ಮಿಗಳಿಂದ ಜಲಜೀವನ್ ಮಿಷನ್ ಪೈಪ್‌ಗಳಿಗೆ ಬೆಂಕಿ-1ಕೋಟಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ
ಧಾರವಾಡ: ಜಲಜೀವನ್ ಮಿಷನ್ ಯೋಜನೆಯ ಪೈಪ್‌ಲೈನ್‌ಗಳಿಗೆ ಬೆಂಕಿ ತಗುಲಿ ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಧಾರವಾಡದ ಹೆಬ್ಬಳ್ಳಿ ಗ್ರಾಮದ ಬಳಿ ನಡೆದಿದೆ. ಯಾರೋ ದುಷ್ಕರ್ಮಿಗಳು ಪೈಪ್‌ಗಳಿಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯಾಗಿದ್ದು ಯೋಜನೆಗೆ ಸಂಬಂಧಿಸಿದಂತೆ ಅವಶ್ಯಕತೆಯಿದ್ದ ಪೈಪ್‌ಗಳು ಮತ್ತು ಯಂತ್ರೋಪಕರಣಗಳನ್ನು ಊರಿನ ಅಚೆ ಗೋಡೌನ್‌ನಲ್ಲಿ ಸಂಗ್ರಹ ಮಾಡಿ ಇಡಲಾಗಿತ್ತು. ಯಾರೋ ದುಷ್ಕರ್ಮಿಗಳು ಯೋಜನಾ ಸಲಕರಣೆಗಳಿಗೆ ಬೆಂಕಿ ಹಂಚಿದ್ದಾರೆ. ಗಟನೆ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ಮೂವತ್ತಕ್ಕೂ ಅಧಿಕ ಮೇವಿನ ಬಣವೆಗಳಿಗೆ ಬೆಂಕಿ
ಬೇಸಿಗೆ ಕಾಲದಲ್ಲಿ ಹಸುಗಳಿಗೆ ಮೇವಿನ ಬವಣೆ ಉಂಟಾಗುತ್ತದೆ ಬವಣೆ ನೀಗಿಸಲು ಅನ್ನದಾತರು ಮಳೆಗಾಲದಿಂದಲೇ ಅಲ್ಪ ಸ್ವಲ್ಪ ಮೇವನ್ನು ಕೂಡಿಟ್ಟು. ಬೇಸಿಗೆ ಕಾಳದಲ್ಲಿ ರಾಸುಗಳಿಗೆಂದು ಬಣವೆ ಹಾಕ್ತಾರೆ. ಆದ್ರೆ ಅದರ ಮೇಲೂ ಕಿರಾತಕರ ಕಣ್ಣು ಬಿದ್ದಿದ್ದು ಬಣವೆಗಳಿಗೆ ಬೆಂಕಿ ಹಚ್ಚಿದ್ದಾರೆ. ಕಾಡ್ಗಿಚ್ಚಿಗೆ ಸುಮಾರು ಮೂವತ್ತಕ್ಕೂ ಹೆಚ್ಚು ಬಣವೆಗಳು ಸುಟ್ಟು ಕರಕಲಾಗಿರುವ ಘಟನೆ ಬೆಳಗಾವಿಯ ಭೂತರಾಮನಹಟ್ಟಿಯಲ್ಲಿ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ರೂ ಬಣವೆಗಳು ಸಂಪೂರ್ಣ ಸುಟ್ಟು ಬೂದಿಯಾಗಿವೆ. ಹಸುಗಳಿಗೆ ಮೇವಿಲ್ಲದೆ ರೈತ ಕಂಗಾಲಾಗಿದ್ದಾನೆ.