International

RUSSIA-UKRAINE WAR: ಶಸ್ತ್ರಾಸ್ತ್ರ ಕೆಳಗಿಟ್ಟರೆ ಮಾತುಕತೆ; ಉಕ್ರೇನ್‌ಗೆ ರಷ್ಯಾ ಸಂದೇಶ

ಮಾಸ್ಕೋ: ಉಕ್ರೇನ್‌ ಮೇಲೆ ನಾವು ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಇದಕ್ಕೆ ಉಕ್ರೇನ್‌ ಕೂಡಾ ಪ್ರತಿರೋಧ ತೋರುತ್ತಿದೆ. ಉಕ್ರೇನ್‌ ಸೇನೆ ಶಸ್ತ್ರಾಸ್ತ್ರ ಕೆಳಗಿಟ್ಟು ಮಾತುಕತೆಗೆ ಬಂದರೆ, ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದು ರಷ್ಯಾ ಹೇಳಿದೆ. ಮಾಧ್ಯಮ ಹೇಳಿಕೆ ನೀಡಿರುವ ರಷ್ಯಾದ ವಿದೇಶಾಂಗ ಸಚಿವ ಲಾವ್‌ರೊವ್‌, ಉದ್ವಿಗ್ನತೆ ಶಮನಗೊಳಿಸಲು ಮಾತುಕತೆಗೆ ಸಿದ್ಧವಿದ್ದೇವೆ. ದಕ್ಕೆ ಉಕ್ರೇನ್‌ ಶಸ್ತ್ರಾಸ್ತ್ರ ಕೆಳಗಿಟ್ಟು ಬರಬೇಕು ಎಂದು ಹೇಳಿದ್ದಾರೆ.

ನಾವು ಉಕ್ರೇನ್ ರಾಷ್ಟ್ರವನ್ನು ಆಕ್ರಮಿಸುವುದಕ್ಕಾಗಿ ಈ ದಾಳಿ ನಡೆಸಿಲ್ಲ. ಉಕ್ರೇನ್‌ ರಾಷ್ಟ್ರದ ಜನರನ್ನು ಅಲ್ಲಿನ ಸರ್ಕಾರದ ದಬ್ಬಾಳಿಕೆಯಿಂದ ರಕ್ಷಿಸಲು ನಾವು ಮುಂದಾಗಿದ್ದೇನೆ. ಯಾಕೆಂದರೆ ಉಕ್ರೇನ್‌ ಸರ್ಕಾರವನ್ನು ಪ್ರಜಾಸತ್ತಾತ್ಮಕ ಎಂದು ನಾವು ಒಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್‌ರೊವ್‌ ಹೇಳಿದ್ದಾರೆ. ಇನ್ನು ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ಕ್ಷಿಪಣಿ ದಾಳಿ ನಡೆಸಿಲ್ಲ ಎಂದು ರಷ್ಯಾ ಇದೇ ವೇಳೆ ಸ್ಪಷ್ಟಪಡಿಸಿದೆ.

Share Post