HIJAB CASE: ಹಿಜಾಬ್ ಕೇಸ್ ವಿಚಾರಣೆ ಅಂತ್ಯ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು: ಕಳೆದ ಎರಡು ವಾರದಿಂದ ನಡೆಯುತ್ತಿದ್ದ ಹಿಜಾಬ್ ವಿವಾದದ ಕುರಿತ ಪ್ರಕರಣದ ವಿಚಾರಣೆ ಇಂದು ಮುಕ್ತಾಯವಾಗಿದೆ. ಎರಡೂ ಕಡೆಯ ವಾದವನ್ನು ಹೈಕೋರ್ಟ್ ತ್ರಿಸದಸ್ಯ ಪೀಠ ಆಲಿಸಿದೆ. ಆದರೆ ತೀರ್ಪು ಇನ್ನೂ ಪ್ರಕಟಿಸಿಲ್ಲ. ತೀರ್ಪನ್ನು ಕಾಯ್ದಿರಿಸಿರುವ ಹೈಕೋರ್ಟ್ ತ್ರಿಸದಸ್ಯ ಪೀಠ, ವಿಚಾರಣೆಯನ್ನು ಮುಗಿಸಿದೆ.
ಶಾಲೆ ಹಾಗೂ ಕಾಲೇಜಗಳಲ್ಲಿ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ಎರಡೂ ಕಡೆಯ ವಕೀಲರಿಂದ ವಾದ ಮಂಡನೆ ಮಾಡಲಾಯಿತು. ಕಳೆದ ಎರಡು ವಾರಗಳಿಂದ ಎರಡೂ ಕಡೆಯ ವಕೀಲರು ವಾದ ಮಂಡಿಸಿದ್ದರು. ಇದೀಗ ಕೋರ್ಟ್ ಎಲ್ಲಾ ವಾದವನ್ನು ಆಲಿಸಿ, ತೀರ್ಪುನ್ನು ಕಾಯ್ದಿರಿಸಿದೆ. ಮುಂದಿನ ವಾರದಲ್ಲಿ ತೀರ್ಪು ನೀಡುವ ಸಾಧ್ಯತೆ ಇದೆ.