International

ಬ್ರಿಟನ್‌ ವಿಮಾನಗಳ ಮೇಲೆ ರಷ್ಯಾ ನಿರ್ಬಂಧ-ಸೇಡಿಗೆ ಸೇಡು ಎನ್ನುತ್ತಿರುವ ಪುಟಿನ್

ಬ್ರಿಟನ್:‌ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮಾಡುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳು ಆಕ್ಷೇಪಣೆ ವ್ಯಕ್ತಪಡಿಸುತ್ತಿವೆ. ಈ ನಿಟ್ಟಿನಲ್ಲಿ ಬ್ರಿಟನ್‌ ಕೂಡಾ ರಷ್ಯಾ ವಿರುದ್ಧ ಕೆಲವು ನಿಬಂಧನೆಗಳನ್ನು ವಿಧಿಸಿದೆ. ಅದರ ಪ್ರತೀಕಾರವನ್ನು ತೀರಿಸಿಕೊಳ್ಳಲು ರಷ್ಯಾ ಮುಂದಾಗಿದೆ. ಯುಕೆನ ಎಲ್ಲಾ ವಿಮಾನಗಳ ಮೇಲೆ ರಷ್ಯಾ ನಿರ್ಬಂಧ ಹೇರಿದೆ. ಯುಕೆ ವಿಮಾಣಗಳು ತಮ್ಮ ವಾಯುನೆಲೆಯನ್ನು ಪ್ರವೇಶಿಸದಂತೆ ನಿರ್ಬಂಧ ಹಾಕಿದೆ.

ಫೆಬ್ರವರಿ 25 ರಂದು ಮಧ್ಯರಾತ್ರಿ 12.01 ರಿಂದ, ರಷ್ಯಾದಿಂದ ಚಾರ್ಟರ್ಡ್ ಅಥವಾ ಆಪರೇಟೆಡ್ ನಿಗದಿತ ಸೇವೆಯಲ್ಲಿರುವ ಯಾವುದೇ ವಿಮಾನಗಳು ಯುಕೆ ವಾಯುನೆಲೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುವುದು ಎಂದು ಬೋರಿಸ್ ಜಾನ್ಸನ್ ಘೋಷಿಸಿದರು. ರಷ್ಯಾ ಧ್ವಜ ಹೊಂದಿರುವ ವಿಮಾನವನ್ನು ಯುಕೆಯಲ್ಲಿ ನಿಷೇಧಿಸಲಾಗಿದೆ. ಸಾಮಾನ್ಯವಾಗಿ ಈ ವಿಮಾನ ರಷ್ಯಾದಿಂದ ಲಂಡನ್‌ಗೆ ದೈನಂದಿನ ವಾಣಿಜ್ಯ ಸೇವೆಗಳ ಕಾರ್ಯವನ್ನು ನಿರ್ವಹಿಸುತ್ತದೆ. ಯುಕೆ ಸಿವಿಲ್ ಏವಿಯೇಷನ್ ​​ಅಥಾರಿಟಿ (ಸಿಎಎ) ಏರೋಫ್ಲಾಟ್ ವಿದೇಶಿ ವಾಹಕ ಪರವಾನಗಿಯನ್ನು ಅನಿರ್ದಿಷ್ಟವಾಗಿ ಅಮಾನತುಗೊಳಿಸಲಾಗಿದೆ ಎಂದು ಯುಕೆ ದೃಢಪಡಿಸಿದೆ. ಮುಂದಿನ ಸೂಚನೆ ಬರುವವರೆಗೂ ಏರೋಫ್ಲಾಟ್ ಯುನೈಟೆಡ್ ಕಿಂಗ್‌ಡಮ್‌ಗೆ ವಿಮಾನಗಳನ್ನು ಅನುಮತಿಸುವುದಿಲ್ಲ ಎಂದು ಸಿಎಎ ಹೇಳಿದೆ.

ರಷ್ಯಾದ ವಿಮಾನಗಳು ಯುಕೆ ವಾಯುಪ್ರದೇಶಕ್ಕೆ ಪ್ರವೇಶಿಸುವುದನ್ನು ಅಥವಾ ಬ್ರಿಟಿಷ್ ನೆಲದಲ್ಲಿ ಇಳಿಯುವುದನ್ನು ನಿಷೇಧಿಸುವ ನಿರ್ಬಂಧಗಳಿಗೆ ಸಹಿ ಹಾಕಿವೆ ಎಂದು ಬ್ರಿಟಿಷ್ ಸಾರಿಗೆ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಪುಟಿನ್ ಹೇಯ ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ಜನರ ಜೀವಕ್ಕೆ ಅಪಾಯವನ್ನುಂಟುಮಾಡುವವರನ್ನು ಎಂದಿಗೂ ಸಹಿಸುವುದಿಲ್ಲ ಎಂದು ಯುಕೆ ಸ್ಪಷ್ಟಪಡಿಸಿದೆ. ಬ್ರಿಟಿಷ್ ಏರ್‌ವೇಸ್ ಮಾತೃ ಸಂಸ್ಥೆ ಐಎಜಿ ಪ್ರಧಾನಿಯವರ ನಿರ್ದೇಶನದ ನಂತರ ರಷ್ಯಾದ ವಾಯುಪ್ರದೇಶದಿಂದ ವಿಮಾನಗಳನ್ನು ತಿರುಗಿಸುವುದಾಗಿ ಹೇಳಿದೆ. ಹೀಥ್ರೂನಿಂದ ಮಾಸ್ಕೋಗೆ ಬಿಎ ವಿಮಾನವನ್ನು ರದ್ದುಗೊಳಿಸುವುದಾಗಿ ಲಂಡನ್ ಘೋಷಿಸಿತು. ಬ್ರಿಟನ್‌ನ ಈ ನಿರ್ಣಯದಿಂದ ರಷ್ಯಾ ಕೂಡ ಯುಕೆ ವಿಮಾನಗಳ ಮೇಲೆ ನಿರ್ಬಂಧ ವಿಧಿಸಿದೆ.

Share Post