International

RUSSIA-UKRAINE WAR; ರೊಮೇನಿಯಾ, ಹಂಗೇರಿ ಮೂಲಕ ಭಾರತೀಯ ಏರ್‌ ಲಿಫ್ಟ್‌ಗೆ ಚಿಂತನೆ

ನವದೆಹಲಿ: ಉಕ್ರೇನ್‌ ಸಾವಿರಾರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ರಷ್ಯಾ ಯುದ್ಧ ಘೋಷಿಸಿರುವ ಹಿನ್ನೆಲೆಯಲ್ಲಿ ಎಲ್ಲರೂ ಭಯಭೀತಿಯಲ್ಲಿದ್ದಾರೆ. ಹೀಗಾಗಿ ಅವರನ್ನೆಲ್ಲಾ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರೊಮೇನಿಯಾ, ಹಂಗೇರಿ ದೇಶಗಳ ಮೂಲಕ ಏರ್‌ ಲಿಫ್ಟ್‌ ಮಾಡುವ ಬಗ್ಗೆ ಭಾರತ ಸರ್ಕಾರ ಚಿಂತನೆ ನಡೆಸುತ್ತಿದೆ. 

ರಸ್ತೆ ಮಾರ್ಗದ ಮೂಲಕ ಭಾರತೀಯರನ್ನು ರೊಮೇನಿಯಾ ಅಥವಾ ಹಂಗೇರಿಗೆ ಕರೆತಂದು, ಅಲ್ಲಿಂದ ಏರ್‌ ಲಿಫ್ಟ್‌ ಮಾಡಲು ಚಿಂತಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಭಾರತ ಸರ್ಕಾರ ಮತ್ತು ಹಂಗೇರಿಯಲ್ಲಿರುವ ಅದರ ರಾಯಭಾರ ಕಚೇರಿಯು ರೊಮೇನಿಯಾ ಮತ್ತು ಹಂಗೇರಿಯಿಂದ ಸ್ಥಳಾಂತರಿಸುವ ಮಾರ್ಗಗಳನ್ನು ಹುಡುಕಲು ಕೆಲಸ ಮಾಡುತ್ತಿದೆ.

ಉಕ್ರೇನ್‌ನಲ್ಲಿರುವ ಭಾರತೀಯರು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಸಹಾಯವಾಣಿಗೆ ಕರೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದೇ ವೇಳೆ ಉಕ್ರೇನ್ ನಿಂದ ಭಾರತಕ್ಕೆ ವಾಪಸಾಗುವ ಭಾರತೀಯರ ಪ್ರಯಾಣದ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುವುದಾಗಿ ಹೇಳಿದೆ ಎಂದು ಖಾಸಗಿ ಸುದ್ದಿಸಂಸ್ಥೆಯೊಂದರು ವರದಿ ಮಾಡಿದೆ.

Share Post