ಯುದ್ಧ ನಿಲ್ಲಿಸುವಂತೆ ರಷ್ಯಾ, ಉಕ್ರೇನ್ ಪ್ರಜೆಗಳ ಪ್ರತಿಭಟನೆ – 1,700ಕ್ಕೂ ಹೆಚ್ಚು ಜನರ ಬಂಧನ
ರಷ್ಯಾ: ಉಕ್ರೇನ್ ವಿರುದ್ಧ ರಷ್ಯಾ ಸಾರಿರುವ ಪ್ರತಿಭಟನೆ ವಿರುದ್ಧ ತನ್ನದೇ ದೇಶದ ಪ್ರಜೆಗಳು ಸಿಡಿದೆದ್ದಿದ್ದಾರೆ. ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವನ್ನು ಕೂಡಲೇ ನಿಲ್ಲಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಯುದ್ಧ ನಿಲ್ಲಿಸುವಂತೆ ಹಲವು ದೇಶಗಳು ರಷ್ಯಾ ಮೇಲೆ ಕರಲವು ನಿರ್ಬಂಧಗಳನ್ನು ವಿಧಿಸಿವೆ. ರಷ್ಯಾ ರಾಜಧಾನಿ ಸೇಂಟ್ ಪೀಟರ್ಸ್ ಬರ್ಗ್ನಲ್ಲಿ ಸುಮಾರು 1,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಮುಸುಕುಧಾರಿ ಪೊಲೀಸರು ಧರಣಿ ನಿರತರನ್ನು ಬಂಧಿಸಿದ್ದಾರೆ.
ಜೊತೆಗೆ ಮಾಸ್ಕೋದ ಪುಷ್ಕಿನ್ ಚೌಕದ ಬಳಿಯೂ ʻಯುದ್ಧ ಬೇಡʼ ಎಂದು ಸುಮಾರು 1,700ಕ್ಕೂ ಹೆಚ್ಚು ಜನ ಪ್ರತಿಭಟನೆ ನಡೆಸಿದ್ದಾರೆ ಎಲ್ಲರನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈಗಾಗಲೇ ಜೈಲಿನಲ್ಲಿರುವ ವಿರೋಧ ಪಕ್ಷದ ನಾಯಕ ಕೂಡ ರಷ್ಯಾ ತನ್ನ ಆಂತರಿಕ ಸಮಸ್ಯೆಗಳನ್ನು ಮುಚ್ಚಿಹಾಕಿಕೊಳ್ಳಲು ಉಕ್ರೇನ್ ಮೇಲೆ ಯುದ್ಧ ಸಾರಿದೆ ಎಂಬ ಆರೋಪ ಮಾಡಿದ್ದಾರೆ.
ಪ್ರತಿಭಟನಾಕಾರರು ಅರೆಸ್ಟ್ ಮಾಡಬೇಕಾಗಿರುವುದು ನಮ್ಮನ್ನಲ್ಲ, ಪುಟಿನ್ ಅವರನ್ನು ಬಂಧಿಸಿ ಎಂದು ಆಕ್ರೋಸ ವ್ಯಕ್ತಪಡಿಸಿದ್ದಾರೆ. ಉಕ್ರೇನ್ನಲ್ಲಿ ನಮ್ಮ ಬಂಧುಗಳು, ಸ್ನೇಹಿತರು ಪ್ರೀತಿ ಪಾತ್ರರು ನೆಲೆಸಿದ್ದಾರೆ ಅವರಿಗೆ ಏನು ಹೇಳಲಿ ಅಲ್ಲೇ ಇರಿ ಎನ್ನಬೇಕಾ..? ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿರುವ ರಷ್ಯಾ ರಾಯಭಾರಿ ಕಚೇರಿ ಎದುರು ಉಕ್ರೇನ್ ಪ್ರಜೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
"Arrest Putin not me", yells a protestor in Russia. #Ukraine pic.twitter.com/TzZHmx4y16
— Rasis Bhandari (@rasisbhandari) February 25, 2022