ಉಕ್ರೇನ್ನಲ್ಲಿರುವ ಭಾರತೀಯರಿಗಾಗಿ ಕಂಟ್ರೋಲ್ ರೂಮ್ ತೆರೆದ ಭಾರತ ಸರ್ಕಾರ
ದೆಹಲಿ: ಉಕ್ರೇನ್ನಲ್ಲಿ ರಷ್ಯಾ ದಾಳಿಯಿಂದಾಗಿ ಸಾಕಷ್ಟು ಅಮಾಹುತಗಳು ನಡೆದಿವೆ. ಸಾವಿರಾರು ಭಾರತೀಯರು ಉಕ್ರೇನ್ನಲ್ಲಿ ಸಿಲುಕಿರುವ ಹಿನ್ನೆಲೆ ಭಾರತ ಸರ್ಕಾರ ಕಂಟ್ರೋಲ್ ರೂಮ್ ತೆರೆದಿದೆ. ವಿದೇಶಾಗ ಸಚಿವಾಲಯದ ನೇತೃತ್ವದಲ್ಲಿ ತಂಡ ರಚನೆ ಮಾಡಿದೆ. ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳನ್ನು ಕರೆತರಲು ವ್ಯವಸ್ಥೆ ರೂಪಿಸುತ್ತಿದೆ. ಸುರಕ್ಷಿತವಾಗಿ ಎಲ್ಲರನ್ನೂ ವಾಪಸ್ ಕರೆತರಲು ಕಾರ್ಯಾಚರಣೆ ನಡೆಸುತ್ತಿದೆ.
ಇನ್ನೂ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆ ಕರೆದಿದ್ದು, ಉಕ್ರೇನ್ನ ಪರಿಸ್ಥಿತಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಯುದ್ಧ ಪ್ರದೇಶದತ್ತ ತೆರಳದಂತೆ ಭಾರತೀಯರಿಗೆ ಸೂಚನೆ ನೀಡಲಾಗಿದೆ. ಉಕ್ರೇನ್ನಲ್ಲಿ ಬಿಕ್ಕಟ್ಟು ಹೆಚ್ಚಿದ್ದು, ಇರುವಲ್ಲೇ ಸುರಕ್ಷಿತವಾಗಿರಿ ಎಂದು ಸೂಚನೆ ನೀಡಿದ್ದಾರೆ. ಮನೆ, ಹೊಟೇಲ್ಗಳಲ್ಲಿ ಸುರಕ್ಷಿತವಾಗಿರಲು ಭಾರತೀಯ ರಾಯಭಾರಿ ಕಚೇರಿ ಸಲಹೆ ನೀಡಿದೆ. ಕೀವ್ ಕಡೆ ಪ್ರಯಾಣ ಮಾಡದಂತೆ ಪರಿಸ್ಥಿತಿ ಅವಲೋಕಿಸಿ ಅಗತ್ಯ ಸೂಚನೆ ನೀಡಲಾಗುವುದು ಎಂದು ಇಂಡಿಯನ್ ಎಂಬಸ್ಸಿ ತಿಳಿಸಿದೆ.