International

ಉಕ್ರೇನ್‌ ಬೆನ್ನಿಗೆ ನಿಂತ ಅಮೆರಿಕ; ಪೋಲೆಂಡ್‌ ಏರ್‌ಬೇಸ್‌ನಲ್ಲಿ 5000 ಸೈನಿಕರು..!

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದೆ. ರಷ್ಯಾ ಸೇನೆ ಉಕ್ರೇನ್‌ನ ಅತಿದೊಡ್ಡ ಬಂದರು ಒಡೆಸ್ಸಾದ ಬ್ಲ್ಯಾಕ್‌ ಸಿ ಪೋರ್ಟ್‌ ಮೇಲೆ ದಾಳಿ ಮಾಡಿದ್ದಾರೆ. ಕೀವ್‌, ಕಾರ್ಕೀವ್‌ ವಿಮಾನ ನಿಲ್ದಾಣಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ.

ಈ ನಡುವೆ ಅಮೆರಿಕ ಉಕ್ರೇನ್‌ ಬೆನ್ನಿಗೆ ನಿಂತಿದೆ. ಈಗಾಗಲೇ ಪೋಲೆಂಡ್‌ ಏರ್‌ಬೇಸ್‌ನಲ್ಲಿ ಅಮೆರಿಕ ಸೈನಿಕರು ನಿಯೋಜನೆಗೊಂಡಿದ್ದಾರೆ. ಸುಮಾರು 5000 ಅಮೆರಿಕ ಸೈನಿಕರು ಪೋಲೆಂಡ್‌ ಏರ್‌ಬೇಸ್‌ಗೆ ಆಗಮಿಸಿದ್ದಾರೆ.

ಈ ನಡುವೆ ರಷ್ಯಾ ಆಧ್ಯಕ್ಷ ಪುಟಿನ್‌ ನ್ಯಾಟೋ ಪಡೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದರಲ್ಲಿ ಯಾರೇ ಮುಗು ತೂರಿಸಿದರೂ ಹುಷಾರ್‌. ಎಂದೂ ನೋಡಿರದ ಪರಿಣಾಮ ಎದುರಿಸುತ್ತೀರಿ ಎಂದು ವಾರ್ನ್‌ ಮಾಡಿದ್ಧಾರೆ. ಈ ನಡುವೆ ಈ ಕೂಡಲೇ ಯುದ್ಧ ನಿಲ್ಲಿಸುವಂತೆ ವಿಶ್ವಸಂಸ್ಥೆ ರಷ್ಯಾಗೆ ಮನವಿ ಮಾಡಿದೆ.

Share Post