ಕೊಟ್ಟ ಮಾತು ಉಳಿಸಿಕೊಂಡ ಫ್ರಾನ್ಸ್-36ರಫೇಲ್ ಯುದ್ಧ ವಿಮಾನಗಳ ಹಸ್ತಾಂತರ
ದೆಹಲಿ: ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಸಂಚಲನ ಮೂಡಿಸಿರುವ ನಾಟಕೀಯ ಬೆಳವಣಿಗೆಗಳ ನಡುವೆಯೇ ಫ್ರಾನ್ಸ್ ಮತ್ತು ಭಾರತ ನಡುವಿನ ರಫೇಲ್ ಒಪ್ಪಂದ ಯೋಜನೆಯನ್ನು ಫ್ರಾನ್ಸ್ ಕೊನೆಗೂ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅಂತಿಮ ಹಂತದ ಭಾಗವಾಗಿ ಫ್ರಾನ್ಸ್ ಭಾರತಕ್ಕೆ 36 ರಫೇಲ್ ಫೈಟರ್ ಜೆಟ್ ಗಳನ್ನು ಹಸ್ತಾಂತರಿಸಿದ್ದು, ರಫೇಲ್ ಒಪ್ಪಂದದ ಪ್ರಕಾರ ಭಾರತಕ್ಕೆ ಯುದ್ಧ ವಿಮಾನಗಳನ್ನು ಪೂರೈಸಿದೆ.
ಮಂಗಳವಾರ ಸಂಜೆ ಫ್ರಾನ್ಸ್ನಿಂದ ಹೊರಟು ಮೂರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಪ್ಪಂದದ ಭಾಗವಾಗಿ ಫ್ರಾನ್ಸ್ 36 ಯುದ್ಧ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ಆದರೆ, ಭಾರತೀಯ ಅಧಿಕಾರಿಗಳ ಸೂಚನೆಯಂತೆ ಒಂದು ವಿಮಾನವನ್ನು ಮಾತ್ರ ವಿಶೇಷವಾಗಿ ತಯಾರಿಸಲಾಗಿದೆ. ಎಲ್ಲಾ ನಿರ್ದಿಷ್ಟ ಸುಧಾರಣೆಗಳೊಂದಿಗೆ ಕೊನೆಯ ಯುದ್ಧ ವಿಮಾನಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದರೂ.. ವಿತರಣೆಯು ಮಾರ್ಚ್ನಲ್ಲಿ ನಡೆಯಲಿದೆ. ಇಲ್ಲಿಯವರೆಗೆ ಎಲ್ಲಾ ಯುದ್ಧವಿಮಾನಗಳನ್ನು ನೇರವಾಗಿ ಭಾರತಕ್ಕೆ ತಲುಪಿಸಲಾಗಿದೆ.ಈ ಕೊನೆಯ ವಿಮಾನವನ್ನು ಫ್ರಾನ್ಸ್ನಲ್ಲಿರುವ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲು ಸೂಚನೆ ನೀಡಿದೆ.
France has delivered the entire consignment of 36 #Rafale fighters to India, with the last one being handed over to India in France.
The last fighter with all India's specific enhancements is expected to be delivered next month. pic.twitter.com/FnQD5WzeTR— Defence Decode® (@DefenceDecode) February 23, 2022
ರಫೇಲ್ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿರುವ ಕುರಿತು ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು, ಈ ಒಪ್ಪಂದದಿಂದ ಫ್ರಾನ್ಸ್ ಅನ್ನು ಭಾರತ ಉನ್ನತ ಮಟ್ಟದಲ್ಲಿ ಕಾಣಲು ಶುರು ಮಾಡಿದೆ ಎಂದರು. ಫ್ರಾನ್ಸ್ನಲ್ಲಿರುವ ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ರಿಲೇಶನ್ಸ್ನಲ್ಲಿ “ಫ್ರಾನ್ಸ್ ಅನ್ನು ಭಾರತ ಹೇಗೆ ಕಾಣುತ್ತದೆ” ಎಂಬ ವಿಷಯದ ಕುರಿತು ಜೈಶಂಕರ್ ಸುದೀರ್ಘವಾಗಿ ಮಾತನಾಡಿ, ಜಾಗತಿಕವಾಗಿ, ಕಳೆದ ಎರಡು ದಶಕಗಳಲ್ಲಿ ಭಾರತವು ತನ್ನ ಸಂಬಂಧಗಳಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ ಎಂದರು. ಫ್ರಾನ್ಸ್ನೊಂದಿಗಿನ ಭಾರತದ ಸಂಬಂಧವು ಮುಂದಿನ ಪೀಳಿಗೆಗೆ ಸೇತುವೆಯಾಗಿದೆ ಎಂದು ಜೈಶಂಕರ್ ವಿವರಿಸಿದ್ರು. ಫ್ರಾನ್ಸ್ನೊಂದಿಗಿನ ಭಾರತದ ಸಂಬಂಧಗಳು ಸ್ಥಿರ ಮತ್ತು ಸ್ಪಷ್ಟ ದಿಕ್ಕಿನಲ್ಲಿ ಮುನ್ನಡೆಯುತ್ತಿವೆ.
ಉಕ್ರೇನ್-ರಷ್ಯಾ ಬಿಕ್ಕಟ್ಟು ಸೇರಿದಂತೆ ಯುರೋಪ್ನಲ್ಲಿ ಇಂದು ಜಗತ್ತು ಹಲವಾರು ಬಿಕ್ಕಟ್ಟುಗಳ ಮಧ್ಯೆ ಇದೆ ಎಂದಿದ್ದಾರೆ. ಈ ಬೆಳವಣಿಗೆಗಳಿಂದ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಯಾರನ್ನೂ ಅವಲಂಬಿಸದೆ ಯಶಸ್ವಿಯಾಗಬಹುದು ಎಂದು ಜೈಶಂಕರ್ ಹೇಳಿದರು.