ಕಲಾವತಿ ಹಾಡಿಗೆ ಕೀರ್ತಿ ಸುರೇಶ್ ಮಸ್ತ್ ಸ್ಟೆಪ್ಸ್-ಅಭಿಮಾನಿಗಳು ಫಿದಾ..!
ಟಾಲಿವುಡ್: ಮಹೇಶ್ ಬಾಬು-ಕೀರ್ತಿ ಸುರೇಶ್ ಜೋಡಿಯ ಆಕ್ಷನ್ ಫ್ಯಾಮಿಲಿ ಎಂಟರ್ಟೈನರ್ ಸರ್ಕಾರು ವಾರಿ ಪಾಟ ಚಿತ್ರದ ಮೊದಲ ಹಾಡು ಸಾಮಾಜಿಕ ಮಾಧ್ಯಮದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಎಲ್ಲಿ ನೋಡದ್ರೂ ಕಲಾವತಿ ಹಾಡು ಅಬ್ಬರ ಜೋರಾಗಿದೆ. ಪ್ರೇಮಿಗಳ ದಿನದಂದು ಬಿಡುಗಡೆಯಾಗಿರುವ ಈ ಹಾಡು ಯೂಟ್ಯೂಬ್ ನಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಪ್ರೇಕ್ಷಕರವರೆಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಹೊಸ ಹಾಡು ರಿಲೀಸ್ ಆದ್ರೆ ಎಲ್ರೂ ನೃತ್ಯ ಮಾಡ್ತಾರೆ ಅದರಲ್ಲಿ ಅಷ್ಟೇನೂ ವಿಶೇಷ ಇರುವುದಿಲ್ಲ. ಆದರೆ ಕಲಾವತಿ ಹಾಡಿಗೆ ಕಲಾವತಿಯೇ ಡಾನ್ಸ್ ಮಾಡಿದ್ರೆ ಹೇಗಿರುತ್ತೆ..? ಕಲಾವತಿ ಹಾಡಿಗೆ ಕೀರ್ತಿ ಸುರೇಶ್ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ಯಾಲೆಂಟೆಡ್ ನಿರ್ದೇಶಕ ಪರುಶುರಾಮ್ ಈ ಸಿನಿಮಾವನ್ನು ಬೇಸಿಗೆಯಲ್ಲಿ ತೆರೆ ಮೇಲೆ ತರಲು ಪ್ರಯತ್ನ ಮಾಡ್ತಿದಾರೆ.
ಸದ್ಯ ಚಿತ್ರತಂಡ ಪ್ರೇಕ್ಷಕರಲ್ಲಿ ಹೈಪ್ ಹೆಚ್ಚಿಸುವ ಕೆಲಸ ಮಾಡುತ್ತಿದೆ.ಅದರ ಭಾಗವಾಗಿ ಪ್ರತಿ ಹಾಡನ್ನು ರಿಲೀಸ್ ಮಾಡುವ ಮೂಲಕ ಪ್ರಚಾರ ನಡೆಸಲಾಗುತ್ತಿದೆ. ಈಗಾಗಲೇ ಬಂದಿರುವ ಮೊದಲ ಹಾಡು ಸೂಪರ್ ಡೂಪರ್ ಹಿಟ್ ಆಗಿದೆ.ಇದೀಗ ಮಹೇಶ್ ಅಭಿಮಾನಿಗಳು ಉಳಿದ ಹಾಡುಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮತ್ತು ಆ ಹಾಡುಗಳು ಹೇಗೆ ಮೂಡಿಬರುತ್ತವೆ ಎಂಬುದನ್ನು ಕಾದು ನೋಡಬೇಕು.