ಚನ್ನಪಟ್ಟಣದಲ್ಲಿ ಜನ ಬೇರೆಯವರಿಗೆ ಸೊಪ್ಪು ಹಾಕೋದಿಲ್ಲ- ಹೆಚ್.ಡಿ.ಕುಮಾರಸ್ವಾಮಿ
ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ 25 ವರ್ಷದಲ್ಲಿ ಆಗದ ಕೆಲಸಗಳು ಮೂರು ವರ್ಷದಲ್ಲಿ ನಾನು ಶಾಸಕನಾದ ಬಳಿಕ ನಡೆದಿವೆ. ಆದರೆ ಈಗ ಕೆಲವರು ಸೌಂಡ್ ಮಾಡಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿ.ಪಿ.ಯೋಗೇಶ್ವರ್ಗೆ ಟಾಂಗ್ ನೀಡಿದರು. ಮಾಕಳಿ ಏತ ನೀರಾವರಿ ಯೋಜನೆಯ ಶಂಕು ಸ್ಥಾಪನೆ ಮಾಡಿದಾಗ ಯಾರು ಚರ್ಚೆ ಮಾಡಿಲ್ಲ. ಇದೀಗ ನಾವೇ ಮಾಡಿದ್ದು ಎನ್ನುತ್ತಿದ್ದಾರೆ.
ಚನ್ನಪಟ್ಟಣ ಕ್ಷೇತ್ರಕ್ಕೆ ದೇವೇಗೌಡ ಕುಟುಂಬದ ಕೊಡುಗೆ ಅಪಾರವಿದೆ. ಯಾರೇ ಏನೇ ಮರಳು ಮಾಡೋಕೆ ಬಂದ್ರೂ ಜನ ಸೊಪ್ಪು ಹಾಕೋದಿಲ್ಲ. ಕೆಲವರನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಹೊರಟಿದ್ದಾರೆ. ಶಾಸಕರುಗಳನ್ನು ಕೊಂಡುಕೊಂಡಿದ್ದು ಆಯ್ತು, ಇದೀಗ ಚನ್ನಪಟ್ಟಣದಲ್ಲಿ ಮುಖಂಡರನ್ನ ಕೊಂಡುಕೊಳ್ಳಲು ಹೊರಟಿದ್ದಾರೆ.
ನಮ್ಮ ಪಕ್ಷದ ಕೆಲ ಮುಖಂಡರು ಸಾಲ ಮಾಡಿಕೊಂಡಿದ್ದರಂತೆ. ಅವರಿಗೆ ಇದೀಗ ದುಡ್ಡು ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ತಿದ್ದಾರೆ. ಮತದಾರರನ್ನ ಖರೀದಿ ಮಾಡಲು ಸಾಧ್ಯವಿಲ್ಲ. ನನ್ನ ಹತ್ತಿರ ಬರುವವರು ಅತ್ಯಂತ ಸಂಕಷ್ಟಕ್ಕೆ ಒಳಗಾದರು ಬರುತ್ತಾರೆ. ಚನ್ನಪಟ್ಟಣದ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಕಾರ್ಯಕರ್ತರನ್ನ ಸೆಳೆಯುವ ಪ್ರಕ್ರಿಯೆ ನಡೆದಿದೆ. ನಾನು ಯಾವುದಕ್ಕೂ ಎದೆಗುಂದಿಲ್ಲವೆಂದರು.