NationalUncategorized

ದುರ್ಗಾದೇವಿಯಾಗಿ ಮಮತಾ ಬ್ಯಾನರ್ಜಿ, ಮಹಿಷಾಸುರನಾಗಿ ಪ್ರಧಾನಿ ಮೋದಿ-ಸಂಚಲನ ಸೃಷ್ಟಿಸಿದ ಪೋಸ್ಟರ್

ಪಶ್ಚಿಮ ಬಂಗಾಳ:  ಮದನಪುರ ಜಿಲ್ಲೆಯಲ್ಲಿ ಹಾಕಲಾಗಿರುವ ಪೋಸ್ಟರ್‌ ಒಂದು ಈಗ ದೇಶದೆಲ್ಲೆಡೆ ಸಂಚಲನ ಮೂಡಿಸುತ್ತಿದೆ. ಈ ಪೋಸ್ಟರ್ ನಲ್ಲಿ ಮಹಿಷಾಸುರನಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಕ್ಷಸರನ್ನು ಸಂಹರಿಸುವ ದುರ್ಗಾದೇವಿ ರೂಪದಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಖವನ್ನು ಗ್ರಾಫಿಕ್ಸ್‌ ಮಾಡಲಾಗಿದೆ. ಬಂಗಾಳದಲ್ಲಿ ಮುಂಬರುವ ಮುನ್ಸಿಪಲ್ ಚುನಾವಣೆಯ ಸಂದರ್ಭದಲ್ಲಿ ಈ ಪೋಸ್ಟರ್ ಆಕ್ರೋಶವನ್ನು ಹುಟ್ಟುಹಾಕಿದೆ.

ತೃಣಮೂಲ ಅಭ್ಯರ್ಥಿ ಅನಿಮಾ ಸಹಾ ಮದನಾಪುರ ಜಿಲ್ಲೆಯ ಮಿಡ್ನಾಪುರದಲ್ಲಿ ಪೋಸ್ಟರ್ ಹಾಕಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಪ. ಬಂಗಾಳದಲ್ಲಿ ವಿವಾದಕ್ಕೆ ಕೇರಾಫ್ ಅಡ್ರೆಸ್ ಆಗಿದೆ. ವಿರೋಧ ಪಕ್ಷ (ಬಿಜೆಪಿ)ಗೆ ಯಾರಾದರೂ ಮತ ಹಾಕಿದರೆ ಬಲಿಯಾಗುತ್ತಾರೆ ಎಂಬ ಸಂದೇಶ ಇದೆ.  ಪೋಸ್ಟರ್‌ನಲ್ಲಿ ಇತರ ಪಕ್ಷಗಳನ್ನು ಮೇಕೆಗಳಾಗಿ ಉಲ್ಲೇಖಿಸಲಾಗಿದ್ದು, ಬೇರೆಯವರಿಗೆ ವೋಟ್‌ ಹಾಕಿದ್ರೆ ಬಲಿಪಶು ಆಗೋದು ಗ್ಯಾರೆಂಟಿ ಎಂದು ಸೂಚಿಸಿದೆ. ಬಿಜೆಪಿಗೆ ವೋಟ್‌ ಹಾಕಿದ್ರೆ  ಅವರನ್ನು ಬಲಿ ಕೊಡುವುದಾಗಿ ಶೀರ್ಷಿಕೆ ಬರೆದಿದ್ದಾರೆ. ಜೊತೆಗೆ ಮೋದಿ ಮತ್ತು ಅಮಿತ್‌ ಶಾರನ್ನು ರಾಕ್ಷಸರ ರೂಪದಲ್ಲಿ ಚಿತ್ರಿಸಲಾಗಿದೆ.

ಇನ್ನೂ ಈ ಪೋಸ್ಟರ್‌ ವಿರುದ್ಧ ಸ್ಥಳೀಯ ಬಿಜೆಪಿ ಮುಖಂಡ ವಿಪುಲ್ ಆಚಾರ್ಯ ಕಿಡಿಕಾರಿದರು. ಇದು ಸನಾತನ ಧರ್ಮ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಮಾಡಿದ ಗಂಭೀರ ಅವಮಾನ ಎಂದು  ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.

ಆದರೆ ಆ ಪೋಸ್ಟರ್ ಹೇಗೆ ಬಂತು ಎಂಬುದು ನನಗೂ ಗೊತ್ತಿಲ್ಲ ಎಂದು ಅನಿಮಾ ಸಹಾ ಹೇಳಿದ್ದಾರೆ.  ಮದನಾಪುರದಲ್ಲಿ ಫೆ.27ರಂದು 108 ಪುರಸಭೆಗಳಿಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆ ಈ ಪೋಸ್ಟರ್ ಸಂಚಲನ ಮೂಡಿಸುತ್ತಿದ್ದು, ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ, ನಗರಸಭೆ ಚುನಾವಣೆಯಲ್ಲೂ ತನ್ನ ಹಿಡಿತ ಸಾಧಿಸುವ ನಿರೀಕ್ಷೆಯಲ್ಲಿದೆ.

Share Post