CrimeDistricts

ನಿಲ್ಲದ KIMS ವೈದ್ಯರ ಯಡವಟ್ಟು-2 ವರ್ಷದ ಕಂದಮ್ಮ ಕೊನೆಯುಸಿರು, ಮುಗಿಲುಮುಟ್ಟಿದ ಹೆತ್ತವರ ಆಕ್ರಂದನ

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯ ಯಡವಟ್ಟು ಒಂದಲ್ಲಾ ಎರಡಲ್ಲಾ ನೂರಾರು ಆರೋಪಗಳು ಆಸ್ಪತ್ರೆ ವಿರುದ್ಧ ಇವೆ. ಅದರ ಸಾಲಿಗೆ ಇಂದು ಮತ್ತೊಂದು ಸೇರಿಕೊಂಡಿದೆ. ಜನ ದೇವರು ಬಿಟ್ರೆ ಕಣ್ಣುಮುಚ್ಚಿ ನಂಬೋದು ವೈದ್ಯರನ್ನು ಮಾತ್ರ ಅಂತಹ ವೈದ್ಯರೇ ಪ್ರಾಣ ಕಸಿದರೆ ಏನು ಮಾಡೋದು. ಹೆತ್ತ ಮಗುವನ್ನು ಕಳೆದುಕೊಂಡು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

ಹುಬ್ಬಳ್ಳಿಯ ಸಂದೇಶ್‌ ಹಾಗೂ ಕೀರ್ತಿ ದಂಪತಿಗೆ ಎರಡು ವರ್ಷದ ರಕ್ಷಾ ಚೌಧರಿ ಎಂಬ ಮುದ್ದಾದ ಮಗು ಇತ್ತು. ಬಾಯಲ್ಲಿ ಗಡ್ಡೆಯಿದ್ದ ಕಾರಣ ವೈದ್ಯರು ಆಸ್ಪತ್ರೆಗೆ ಅಡ್ಮಿಟ್‌ ಮಾಡುವಂತೆ ಸೂಚನೆ ನೀಡಿದ್ರು. ವೈದ್ಯರ ಸೂಚನೆ ಮೇರೆಗೆ ಮಗುವನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಿದ್ರು. ಹೆತ್ತವರಿಗೇ ತಿಳಿಸದೇ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆಪರೇಷನ್‌ ಬಳಿಕ ಮಗು ತೀವ್ರ ರಕ್ತದ್ರಾವದಿಂದ ಮೃತಪಟ್ಟಿದೆ.

ಪೋಷಕರ ಆರೋಪ 

ವೈದ್ಯರ ಹೇಳಿದ್ದರಿಂದ ನಾವು ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ವಿ ಆಪರೇಷನ್‌ ಮಾಡಬೇಕೆಂದು ನಮ್‌ ಬಳಿ ಏನೂ ಹೇಳಿಲ್ಲ. ಅಡ್ಮಿಟ್‌ ಮಾಡುವಾಗ ನಮ್ಮ ಮಗು ಖುಷಯಿಂದ ನಗುನಗುತ್ತಾ ಆಟವಾಡಿಕೊಂಡು ಇತ್ತು. ಆಪರೇಷನ್‌ ಆದ ಬಳಿಕ ರಕ್ರತ ಸ್ರಾವವಾಗಿದೆ. ಕೂಡಲೇ ಮತ್ತೊಂದು ಕಾಸಗಿ ಆಸ್ಪತ್ರೆಗೆ ಮಗುವನ್ನು ರವಾನೆ ಮಾಡಿದ್ರು. ಅಲ್ಲಿ ಸಾಧ್ಯವಾಗದ ಕಾರಣ ಮತ್ತೆ ಪುನಃ ಕಿಮ್ಸ್‌ಗೆ ದಾಖಲು ಮಾಡಿದ್ರು. ಈಗ ನೋಡಿದ್ರೆ ನಮ್‌ ಮಗು ಸಾವನ್ನಪ್ಪಿದೆ. ವೈದ್ಯರನ್ನು ಕೇಳಿದ್ರೆ ಇದರಲ್ಲಿ ನಮ್ಮದೇನೂ ತಪ್ಪಿಲ್ಲ, ಮಗುವಿಗೆ ಹ್ಯಾಮೆನ್ ಜಿಯೊಮ್ ಕಾಯಿಲೆ ಇತ್ತು ಎಂದು ಹೇಳುತ್ತಿದ್ದಾರೆ ಕಂದಮ್ಮನ ಪೋಷಕರು ಕಣ್ಣೀರು ಹಾಕುತ್ತಾ ಆಸ್ಪತ್ರೆ ಮುಂದೆ ಧರಣಿ ಕೂತಿದ್ದಾರೆ.

Share Post