TTD : 2022 – 23ರ ವಾರ್ಷಿಕ ಆದಾಯದ ಅಂದಾಜು 3096.40 ಕೋಟಿ
ಅಮರಾವತಿ : ಶ್ರೀಮಂತ ದೇವಸ್ಥಾನವಾಗಿರುವ ತಿರುಮಲ ತಿರುಪತಿ ದೇವಸ್ಥಾನ ತನ್ನ 2022-23ರ ವಾರ್ಷಿಕ ಬಜೆಟ್ ಅನ್ನು ಮಂಡಿಸಿದೆ. ಈ ವಾರ್ಷಿಕ ಬಜೆಟ್ನಲ್ಲಿ 3096.40 ಕೋಟಿ ರೂ ಆದಾಯ ಬರಲಿದೆ ಎಂದು ಅಂದಾಜಿಸಲಾಗಿದೆ.
TTD ಮಂಡಳಿಯ ಅಧ್ಯಕ್ಷ ವೈ. ವಿ ಸುಬ್ಬಾ ರೆಡ್ಡಿ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ ಕೆ ಎಸ್ ಜವಾಹರ ರೆಡ್ಡಿ ಟಿಟಿಡಿಯ ಮುಂದಿನ 12 ತಿಂಗಳಿನ ಹಣಕಾಸು ಯೋಜನೆಯ ಬಗ್ಗೆ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.
ಭಕ್ತರಿಂದ ದಾನ ಪಾತ್ರೆಗೆ (ಹುಂಡಿ) ಬೀಳುವ ಮೊತ್ತ – 1000ಕೋಟಿ
ಬ್ಯಾಂಕ್ಗಳಲ್ಲಿನ ಠೇವಣಿ ಮೇಲಿನ ಬಡ್ಡಿ – 668.5 ಕೋಟಿ
ಸೇವಾ ಟಿಕೆಟ್ ಮಾರಾಟದಿಂದ – 362 ಕೋಟಿ
ಲಡ್ಡು ಪ್ರಸಾದದಿಂದ – 365 ಕೋಟಿ
ವಸತಿ ಮತ್ತು ಮದುವೆ ಮಂಟಪದ ಬಾಡಿಗೆಯಿಂದ – 95 ಕೋಟಿ
ಭಕ್ತರ ಕೂದಲಿನಿಂದ – 126 ಕೋಟಿ
ವಿವಿಧ ಸೇವೆಗಳ ವೆಚ್ಚ – 1360 ಕೋಟಿ ಎಂದು ಅಂದಾಜಿಸಲಾಗಿದೆ.