BengaluruUncategorized

HIJAB CASE: ನಾಳೆ ಮಧ್ಯಾಹ್ನಕ್ಕೆ ಸರ್ಕಾರದ ಪರ ವಾದ

ಬೆಂಗಳೂರು: ಹಿಜಾಬ್‌ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಇವತ್ತೂ ಮುಂದುವರೆಯಿತು. ಹೈಕೋರ್ಟ್‌ ತ್ರಿಸದಸ್ಯ ಪೀಠದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಯಿತು. ಸರ್ಕಾರದ ಪರ ಇಂದು ವಾದ ಮಂಡಿಸಬೇಕಿತ್ತು. ಆದ್ರೆ ಸರ್ಕಾರದ ಪರ ವಕೀಲರು ನಾಳೆ ವಾದ ಮಂಡಿಸುತ್ತೇನೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಪರ ವಾದ ಮಂಡನೆಗೆ ನಾಳೆ ಮಧ್ಯಾಹ್ನ 2.30ಕ್ಕೆ ಸಮಯ ನಿಗದಿ ಮಾಡಲಾಗಿದೆ. ಇವತ್ತಿನ ವಾದ ಹೇಗಿತ್ತು..? ನೋಡೋಣ ಬನ್ನಿ..

೧. ಪಿಐಎಲ್ ಪರ ವಕೀಲ ರಹಮತ್‌ ಉಲ್ಲಾ ಕೊತ್ವಾಲ್‌ ವಾದ ಮಂಡನೆ

ಸರ್ಕಾರ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಬೇಕು
ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಪಾಲಿಸುವ ಹಕ್ಕಿದೆ
ಧಾರ್ಮಿಕ ಸ್ವಾತಂತ್ರ್ಯವನ್ನು ಸರ್ಕಾರ ಗೌರವಿಸಬೇಕು
ಸರ್ಕಾರ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಬೇಕು

೨. ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ಮೊದಲು ಅರ್ಜಿದಾರರ ಹಿನ್ನೆಲೆ, ಸದುದ್ದೇಶ ತಿಳಿಸಿ
ಅರ್ಜಿದಾರರು ಈ ಹಿಂದೆಯೂ ಹಲವು ಪಿಐಎಲ್‌ ಸಲ್ಲಿಸಿದ್ದರು

೩. ಪಿಐಎಲ್ ಪರ ವಕೀಲ ರಹಮತ್‌ ಉಲ್ಲಾ ಕೊತ್ವಾಲ್‌ ವಾದ

ಕೋರ್ಟ್‌ಗೆ ಸಹಕಾರ ನೀಡಲು ಪಿಐಎಲ್‌ ಸಲ್ಲಿಸಿದ್ದಾರೆ
ಆರ್ಜಿದಾರರು ಸಾಮಾಜಿಕ ಕಾರ್ಯಕರ್ತ ಹಾಗೂ ಆರ್‌ಟಿಐ ಕಾರ್ಯಕರ್ತ

೪. ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ಪಿಐಎಲ್‌ ಸಲ್ಲಿಸುವವರು ನಿಯಮ ಪಾಲಿಸಬೇಕೆಂಬುದು ಗೊತ್ತಿದೆಯೇ..?
ನಿಯಮದಂತೆ ನೀವು ಪ್ರಮಾಣ ಪತ್ರ ಸಲ್ಲಿಸಿದ್ದೀರಾ..?
ಹೈಕೋರ್ಟ್‌ ನಿಯಮದಂತೆ ಪಿಐಎಲ್‌ ಸಲ್ಲಿಸಲಾಗಿದೆಯೇ..?

೫. ಪಿಐಎಲ್ ಪರ ವಕೀಲ ರಹಮತ್‌ ಉಲ್ಲಾ ಕೊತ್ವಾಲ್‌ ವಾದ

ಹೈಕೋರ್ಟ್‌ ನಿಯಮದಂತೆ ಪ್ರಮಾಣಪತ್ರ ಸಲ್ಲಿಸಿದ್ದೇವೆ

‌೬. ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಪ್ರಶ್ನೆ

ಇಂತಹ ಅರ್ಜಿಗಳ ಮೂಲಕ ಕೋರ್ಟ್‌ ಸಮಯ ವ್ಯರ್ಥ ಮಾಡ್ತಿದ್ದೀರಾ..?
ಸೂಕ್ತವಾದ ಅರ್ಜಿ ಸಲ್ಲಿಸಿಲ್ಲ, ಪೇಜ್‌ ನಂಬರ್‌ ಸರಿಯಾಗಿ ಹಾಕಿಲ್ಲ

೭. ವಕೀಲರಿಗೆ ತ್ರಿದಸ್ಯಪೀಠ ಪ್ರಶ್ನೆ

ಅಂತಾರಾಷ್ಟ್ರೀಯ ಒಪ್ಪಂದಗಳನ್ನು ತಪ್ಪಾಗಿ ಉಲ್ಲೇಖ ಮಾಡಲಾಗಿದೆ
ಅಂತಾರಾಷ್ಟ್ರೀಯ ಸಾಮಾಜಿಕ, ಆರ್ಥಿಕ ಒಪ್ಪಂದ ತಪ್ಪಾಗಿ ಉಲ್ಲೇಖ

೮. ಪಿಐಎಲ್ ಪರ ವಕೀಲ ರಹಮತ್‌ ಉಲ್ಲಾ ಕೊತ್ವಾಲ್‌ ವಾದ

ಮಹತ್ವದ ಪ್ರಕರಣದಲ್ಲಿ ತಾಂತ್ರಿಕ ಆಕ್ಷೇಪಣೆ ಬೇಡವೆಂಬುದು ನನ್ನ ಮನವಿ
ನೀವು ಐದು ನಿಮಿಷ ಕೊಟ್ಟರೆ ನನ್ನ ವಾದ ಮುಗಿಸುತ್ತೇನೆ

೯. ಪಿಐಎಲ್‌ ಅರ್ಜಿದಾರ ಡಾ.ವಿನೋದ್‌ ಕುಲಕರ್ಣಿ ವಾದ

ಹಿಜಾಬ್‌ ವಿವಾದದಿಂದ ವಿದ್ಯಾರ್ಥಿನಿಯರ ಮಾನಸಿಕ ಆರೋಗ್ಯಕ್ಕೆ ಧಕ್ಕೆ

೧೦.ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ಅರ್ಜಿಯಲ್ಲಿ ನೀವು ಕೇಳುತ್ತಿರುವ ಮನವಿಗಳೇನು..?

೧೧. ಪಿಐಎಲ್‌ ಅರ್ಜಿದಾರ ಡಾ.ವಿನೋದ್‌ ಕುಲಕರ್ಣಿ ವಾದ

ಶುಕ್ರವಾರದಂದು ಹಿಜಾಬ್‌ ಧರಿಸಲು ಅನುಮತಿ ನೀಡಿ

ರಂಜಾನ್‌ ವೇಳೆಯಲ್ಲಿ ಹಿಜಾಬ್‌ ಧರಿಸಲು ಅನುಮತಿ ನೀಡಲು ಕೋರುತ್ತಿದ್ದೇವೆ

೧೨.ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ನೀವು ಪೇಜ್‌ ನಂಬರ್‌ 9 ರಲ್ಲಿ ಕೋರಿರುವ ಮನವಿ ಓದಿ
ಒಂದನೇ ಮನವಿಯಲ್ಲಿ ಸಮವಸ್ತ್ರ ಕೋರಿದ್ದೀರಿ. ಎರಡನೇ ಮನವಿಯಲ್ಲಿ ಹಿಜಾಬ್‌ ಕೇಳುತ್ತಿದ್ದೀರಿ.
ಎರಡೂ ಒಂದಕ್ಕೊಂದು ವಿರುದ್ಧವಾಗಿವೆ

೧೩. ಪಿಐಎಲ್‌ ಅರ್ಜಿದಾರ ಡಾ.ವಿನೋದ್‌ ಕುಲಕರ್ಣಿ ವಾದ

ಲತಾ ಮಂಗೇಶ್ಕರ್‌ ಹಾಡು ಉಲ್ಲೇಖಿಸಿದ ಅರ್ಜಿದಾರ
ಕುಚ್‌ ಪಾಕರ್‌ ಕುಚ್‌ ಕೋನಾ ಹೈ, ಕುಚ್‌ ಕೋಕರ್‌ ಕುಚ್‌ ಪಾನಾ ಹೈ
ಹಿಜಾಬ್‌ ಸಾರ್ವಜನಿಕ ವ್ಯವಸ್ಥೆಗೆ ವಿರುದ್ಧವಾಗಿಲ್ಲ

ಹೀಗಾಗಿ ಶುಕ್ರವಾರ ಹಿಜಾಬ್‌ ಧರಿಸಲು ಅನುಮತಿ ನೀಡಬೇಕು
ಒಂದು ಪಡೆಯಬೇಕಾದರೆ ಒಂದನ್ನು ಕಳೆದುಕೊಳ್ಳಲೇಬೇಕು

೧೪.ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ಖುರಾನ್‌ನಲ್ಲಿ ಹಿಜಾಬ್‌ ಬಗ್ಗೆ ಎಲ್ಲಿದೆ ಓದಿ ಹೇಳಿ

೧೫. ಪಿಐಎಲ್‌ ಅರ್ಜಿದಾರ ಡಾ.ವಿನೋದ್‌ ಕುಲಕರ್ಣಿ ವಾದ

ಈಗ ಖುರಾನ್‌ ನನ್ನ ಬಳಿ ಇಲ್ಲ, ಹೀಗಾಗಿ ಓದಲು ಆಗುವುದಿಲ್ಲ

೧೬.ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ಹಾಗಾದರೇ ಏಕೆ ಉಲ್ಲೇಖಿಸುತ್ತೀದ್ದೀರಾ..?

೧೭. ಪಿಐಎಲ್‌ ಅರ್ಜಿದಾರ ಡಾ.ವಿನೋದ್‌ ಕುಲಕರ್ಣಿ ವಾದ
ಹಿಜಾಬ್‌ ನಿರ್ಬಂಧಿಸಿದರೆ ಖುರಾನ್‌ ನಿರ್ಬಂಧಿಸಿದಂತೆ

೧೮.ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ಹಾಗಾದರೆ ಹಿಜಾಬ್‌ ಹಾಗೂ ಖುರಾನ್‌ ಎರಡೂ ಒಂದೇ ಎನ್ನುತ್ತೀರಾ..?

೧೭. ಪಿಐಎಲ್‌ ಅರ್ಜಿದಾರ ಡಾ.ವಿನೋದ್‌ ಕುಲಕರ್ಣಿ ವಾದ

ಪ್ರಕರಣದ ಸಂಬಂಧ ಮಧ್ಯಂತರ ಆದೇಶ ನೀಡಬೇಕೆಂಬುದು ನನ್ನ ಮನವಿ

೧೮. ಹಿರಿಯ ವಕೀಲ ಎ.ಎಂ.ಧರ್‌ರಿಂದ ವಾದ ಮಂಡನೆ

ಹಿಜಾಬ್‌ ಇಲ್ಲದೆ ಕಾಲೇಜಿಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ

೧೮.ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ನೀವು ಯಾವ ಕಾಲೇಜಿನಲ್ಲಿ ಓದುತ್ತಿದ್ದೀರಾ..?
ಈ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದೀರಾ..?

೧೮. ಹಿರಿಯ ವಕೀಲ ಎ.ಎಂ.ಧರ್‌ರಿಂದ ವಾದ ಮಂಡನೆ

ಹೌದು ನಾವು ಅರ್ಜಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದೇವೆ. ಪಿಯುಸಿ ಎಂದು ಉಲ್ಲೇಖಿಸಿದ್ದೇವೆ.

ನಾಳೆ ಈ ಬಗ್ಗೆ ಸೂಕ್ತ ಪ್ರಮಾಣ ಪತ್ರ ಸಲ್ಲಿಸುತ್ತೇವೆ. ಅವಕಾಶ ಕೊಡಿ
ಅರ್ಜಿ ಹಿಂಪಡೆಯಲು ಅನುಮತಿ ಕೇಳುತ್ತಿದ್ದೇವೆ

೧೯.ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ನಾವು ಈಗ ಅರ್ಜಿ ವಜಾಗೊಳಿಸುತ್ತೇವೆ
ಸರಿಯಾದ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತೇವೆ

೨೦. ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ವಾದ

ಸರ್ಕಾರದ ಪರವಾಗಿ ನಾಳೆ ವಾದಿಸುತ್ತೇವೆ

೨೧.ಮುಖ್ಯ ನ್ಯಾಯಮೂರ್ತಿ ಪ್ರಶ್ನೆ

ಸರ್ಕಾರದ ಆದೇಶ ಬದಲಿಸಬೇಕಿದ್ದರೆ ಸಮಯ ಕೇಳಿ

೨೨. ಕಾಲೇಜು ಅಭಿವೃದ್ಧಿ ಸಮಿತಿ ಪರ ಸಜ್ಜನ್‌ ಪೂವಯ್ಯ ವಾದ

ಸರ್ಕಾರದ ಪರ ವಾದಿಸಿದ ಮೇಲೆ ನಾನು ವಾದಿಸುತ್ತೇವೆ

 

 

 

 

 

 

Share Post