Bengaluru

ಹಿಜಾಬ್‌ ಅರ್ಜಿ ವಿಚಾರಣೆ ನಾಳೆ ಮಧ್ಯಾಹ್ನಕ್ಕೆ ಮುಂದೂಡಿಕೆ-ತ್ರಿಸದಸ್ಯ ಪೀಠದಿಂದ ಆದೇಶ

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಧಾರಣೆ ಅರ್ಜಿ ವಿಚಾರಣೆ ಹೈಕೋರ್ಟ್‌ ತ್ರಿಸದಸ್ಯ ಪೀಠದಲ್ಲಿ ನಡೆಯುತ್ತಿದೆ. ಇಂದು ಕೂಡ ವಾದ/ಪ್ರತಿವಾದ ನಡೆದಿದ್ದು. ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ. ಹೈಕೋರ್ಟ್‌ ತ್ರಿಸದಸ್ಯ ಪೀಠದಿಂದ ಮುಂದೂಡಿಕೆ ಆದೇಶ ಹೊರಡಿಸಿದೆ. ಇಂದಿನ ವಾದ/ಪ್ರತಿವಾದದ ರಿಪೋರ್ಟ್‌ ಇಲ್ಲಿದೆ.
ನ್ಯಾ.ಕೃಷ್ಣ ದೀಕ್ಷಿತ್‌
ನೀವು ಈ ಮಾರ್ಗಸೂಚಿ ಆಧರಿಸಿ ವಾದ ಮಂಡಿಸುತ್ತಿದ್ದೀರಾ..?ಹಾಗಾದ್ರೆ ಮಾರ್ಗಸೂಚಿ ಬಗ್ಗೆ ತಿಳಿಸಿ
ರವಿವರ್ಮ ಕುಮಾರ್:‌ ಹಿಜಾಬ್‌ ಧರಿಸಿದ ಕಾರಣಕ್ಕೆ ಮಕ್ಕಳ ಮೇಲೆ ಕ್ರಮ ಸರಿಯಲ್ಲ, ಇದು ಆದೇಶವಲ್ಲ ನಾನು ಹೇಳಿಕೆಯಾಗಷ್ಟೇ ಮಾಹಿತಿ ನೀಡುತ್ತಿದ್ದೇನೆ. ಶಿಕ್ಷಣ ಕಾಯ್ದೆಯಡಿ ಸಮವಸ್ತ್ರ ನಿಗದಿಪಡಿಸಿಲ್ಲ. ಇಲಾಖೆ ಏನು ಹೇಳಿದೆ ಎಂಬುದಷ್ಟೇ ಹೇಳುತ್ತಿದ್ದೇನೆ.
ಕೃಷ್ಣ ದೀಕ್ಷಿತ್‌: ನಿರ್ಬಂಧ ವಿಧಿಸಿಲ್ಲ ಎಂದು ಲೈಸೆನ್ಸ್‌ ಇರುವ ಶಸ್ತ್ರಾಸ್ತ್ರ ಕೊಂಡೊಯ್ಯಬಹುದೇ..?ನಿಮ್ಮ ವಾದ ಬೇರೆ ರೀತಿಯ ವ್ಯಾಖ್ಯಾನ ನೀಡುತ್ತಿದೆ.
ರವಿವರ್ಮಕುಮಾರ್:‌ ಹಿಜಾಬ್‌ಗೆ ಕನೂನು ರೀತಿಯಲ್ಲಿ ನಿರ್ಬಂಧ ಇಲ್ಲ ಎಂದ ಮೇಲೆ ಏಕೆ ಅಡ್ಡಿಪಡಿಸಬೇಕು. ಸರ್ಕಾರದ ಆದೇಶದಲ್ಲಿ ಹಿಜಾಬ್‌ಗೆ ನಿರ್ಬಂಧ ವಿಧಿಸಲಾಗಿದೆ. ಸಮಾನತೆ, ಒಗ್ಗಟ್ಟಿನ ಭಾವನೆಗೆ ಹಿಜಾಬ್‌ ಅಡ್ಡಿ ಅಂತ ಹೇಳ್ತಿದೆ. ಸಮವಸ್ತ್ರ ನಿಗದಿ ಅಧಿಕಾರವನ್ನು ನೀಡಲಾಗಿದೆ. ಶಿಕ್ಷಣ ಕಾಯ್ದೆಯಡಿ ಕೆಲವು ಪ್ರಾಧಿಕಾರಗಳಿಗೆ ಮಾತ್ರ ಅಧಿಕಾರ ನೀಡಲಾಗಿದೆ. ಸರ್ಕಾರದ ಅಧೀನದಲ್ಲಿರುವ ಅಧಿಕಾರಿಗೆ ಮಾತ್ರ ಈ ಅಧಿಕಾರ ನೀಡಬಹುದು. ಸಮವಸ್ತ್ರ ನಿಗದಿ ಅಧಿಕಾರವನ್ನು ನಿಡಲಾಗಿದೆ. ಗೆಜೆಟ್‌ ಮೂಲಕ ಮಾತ್ರ ಅಧಿಕಾರ ಹಸ್ತಾಂತರ, ಆದರೆ ಕಾಲೇಜು ಅಭಿವೃದ್ಧ ಸಮಿತಿಯಿಂದ ಅಲ್ಲ. ಸರ್ಕಾರದ ಅಧೀನ ಕಾರ್ಯದರ್ಶಿ ಮೂಲಕ ಸುತ್ತೋಲೆ ಹೊರಡಿಸಲಾಗಿದೆ. ಸರ್ಕಾರದ ಅನುದಾನ ಬಳಸಿಕೊಳ್ಳುವುದು, ಮೂಲಸೌಕರ್ಯ ಕಲ್ಪಿಸುವುದು, ಶಿಕ್ಷಣದ ಗುಣಮಟ್ಟ ಕಾಪಾಡುವುದು, ಶಿಸ್ತು ಸಮಾನತೆ ಕಾಪಾಡುವುದೂ ಗುಣಮಟ್ಟ ಎನ್ನಬಹುದು. ಸರ್ಕಾರದ ಅಧಿಕಾರ ಹಸ್ತಾಂತರವೇ ಕಾನೂನು ಬಾಹಿರ. ಸಮಿತಿ ಶಾಸಕರ ನೇತೃತ್ವದಲ್ಲಿ ಕೆಲಸ ಮಾಡುತ್ತಿದೆ. ಅಧಿಕಾರ ನೀಡಿದ್ರೆ ಅದು ಪ್ರಜಾಪ್ರಭುತ್ವದ ಮರಣಶಾಸನ ಆಗಲಿದೆ. ದಕ್ಷಿಣ ಭಾರತದಲ್ಲಿ ಧಾರ್ಮಿಕ ಗುರುತು ಧರಿಸುವುದು ಸಾಮಾನ್ಯ, ಶಿಕ್ಷಕರು ಸೇರಿದಂತೆ ಹಲವರು ನಾಮ ಧರಿಸುತ್ತಾರೆ. ದೇವಾಲಯದ ಆನೆ ಮೇಲೆ ನಾಮ ಧರಿಸಬಾರದು ಎಂಬ ವಿವಾದ ಎದ್ದಿತ್ತು, ತೆಂಗಳೈ ಹಾಬೇಕೋ ವಡಗಲೈ ನಾಮ ಹಾಕಬೇಕೋ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ನಡೆಯುತ್ತಿತ್ತು. ತೀರ್ಪು ಬರುವ ವೇಳೆಗೆ ಆನೆಯೇ ಸತ್ತು ಹೋಗಿತ್ತು. 56ರಷ್ಟು ಹಿಂದೂಗಳು ಧಾರ್ಮಿಕ ಪೆಂಡೆಂಟ್‌ ಧರಿಸುತ್ತಾರೆ. 84ರಷ್ಟು ಮುಸ್ಲಿಂರು ಗಡ್ಡ ಬಿಡ್ತಾರೆ, ಟೋಪಿ ಹಾಕ್ತಾರೆ. ಸಿಖ್ಖರಲ್ಲೂ 86ರಷ್ಟು ಜನ ಗಡ್ಡ ಬಿಡ್ತಾರೆ.
ಕೃಷ್ಣ ದೀಕ್ಷಿತ್:‌ ಸರ್ವೆ ವರದಿ ಸತ್ಯಾಸತ್ಯತೆ ಬಗ್ಗೆ ದಾಖಲೆ ಇದೆಯೇ..? ಸರ್ವೆ ವರದಿ ಅಧಿಕೃತವಾಗಿದ್ದರೆ ಮಾತ್ರ ಪರಿಗಣಿಸಬಹುದು.
ರವಿವರ್ಮ ಕುಮಾರ್:‌ ನಾನು ಈ ವರದಿಯ ಅಂಧಗಳನ್ನು ಪರಿಗಣಿಸಲು ಕೇಳುತ್ತಿಲ್ಲ, ಎಲ್ಲಾ ವರ್ಗದವರು ಧರ್ಮದ ಗುರುತು ಬಳಸುತ್ತಾರೆ. ಹಿಜಾಬ್‌ಗೆ ಮಾತ್ರ ಈ ತಾರತಮ್ಯ ಏಕೆ..? ನ್ಯಾಯಪೀಠಕ್ಕೆ ರವಿವರ್ಮ ಕುಮಾರ್‌ ಪ್ರಶ್ನೆ. ಹಿಂದೂ ಯುವತಿಯರು ಬಿಂದಿ, ಬಳೆ ತೊಡುತ್ತಾರೆ. ಕ್ರಿಶ್ಚಿಯನ್ನರು ಕ್ರಾಸ್‌ ಹಾಕಿಕೊಳ್ತಾರೆ ಸಿಖ್ಖರು ಟರ್ಬನ್‌ ಹಾಕಿಕೊಳ್ತಾರೆ. ಹೀಗಿದ್ದ ಮೇಲೆ ಮುಸ್ಲಿಂ ಹೆಣ್ಣುಮಕ್ಕಳಿಗೇ ಯಾಕಿಂತಹ ನಿಯಮ..? ಇಂತಹ ಪ್ರಶ್ನೆಗಳು ಸಂವಿದಾನ ರಚನೆಯದಾಗಿನಿಂದಲೂ ಇವೆ. ಹಿಜಾಬ್‌ಗೆ ಮಾತ್ರ ನಿರ್ಬಂಧ ವಿಧಿಸಿರುವುದು ಏಕೆ..? ಧಾರ್ಮಿಕ ಕಾರಣಕ್ಕೆ ತಾರತಮ್ಯ ಮಾಡುವಂತಿಲ್ಲ. ರಾಜ್ಯ ಸರ್ಕಾರ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡ್ತಿದೆ. ಇಂತಹ ಆದೇಶಗಳಿಂದ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ವಾದ ಮಂಡಿಸಿದ್ದಾರೆ.

Share Post