ಈಶ್ವರಪ್ಪ ರಾಷ್ಟ್ರಧ್ವಜ ಹೇಳಿಕೆಗೆ ಕಾನೂನು ಸಚಿವ ಮಾಧುಸ್ವಾಮಿ ಸ್ಪಷ್ಟನೆ
ವಿಧಾನಸಭೆ: ಈಶ್ವರಪ್ಪನವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಹಾಗೆ ಮಾತಾಡಿಲ್ಲ. ಮುಂದೊಂದು ದಿನ ಪಕ್ಷದ ಧ್ವಜ ರಾಷ್ಟ್ರಧ್ವಜವಾಗಿ ಹಾರಿಸಬಹುದು ಎಂದು ಮಾತಾಡಿದ್ದಾರೆ ಅಷ್ಟೇ, ಅದನ್ನು ಅವರ ಸ್ಟೇಟ್‌ಮೆಂಟ್ ಎಂದು ಪರಿಗಣನೆ ಮಾಡಲು ಸಾಧ್ಯವಿಲ್ಲ. ಅವರು ಧ್ವಜಕ್ಕೆ ಅವಮಾನಗುವಂತೆ ಮಾತನಾಡಿಲ್ಲ ಎಂದು ಮಾಧುಸ್ವಾಮಿ ಸಮಜಾಯಿಷಿ ನೀಡಿದ್ದಾರೆ.
ಅವರು ಲಿಖಿತ ರೂಪದಲ್ಲಿ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ ಹಾಗಾಗಿ ಧ್ವಜಕ್ಕೆ ಅಪಮಾನ ಮಾಡಿದ ಸಾಲಿನಲ್ಲಿ ಈ ಹೇಳಿಕೆ ಬರುವುದಿಲ್ಲ ಇದನ್ನು ಪರಿಗಣನೆಗೆ ತೆಗೆದುಕೊಳ್ಳದಂತೆ ಮಾಧುಸ್ವಾಮಿ ಮನವಿ
ಈಶ್ವರಪ್ಪ ನಾನು ರಾಷ್ಟ್ರಧ್ವಜ ಹಾರಿಸುತ್ತೇನೆ ಎಂದಿಲ್ಲ, ಧ್ವಜ ಕೆಳಗೆ ಇಳಿಸುತ್ತೇನೆ ಎಂದು ಹೇಳಿಲ್ಲ. ಒಬ್ಬ ಮಂತ್ರಿಯನನು ದೇಶದ್ರೋಹಿ ಎಂದು ಕರೆಯಲು ಸಾಧ್ಯವಿಲ್ಲ. ರಾಷ್ಟ್ರಧ್ವಜ ಹುಬ್ಬಳ್ಳಿಯಿಂದ ಕಾಶ್ಮೀರದವರೆಗೆ ನಮ್ಮ ಹೆಮ್ಮೆ ಎಂದು ಹೇಳಿರುವ ಪಕ್ಷ ನಮ್ಮದು. ಈ ವಿಚಾರ ನಿಲುವಳಿ ಸೂಚನೆಗೆ ಬರೋದಿಲ್ಲ ಇದನ್ನು ಇಲ್ಲಿಗೆ ಬಿಡಬೇಡಕೆಂದು ಮಾಧುಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.