ಕೀನ್ಯಾ ಮಾಜಿ ಪ್ರಧಾನಿ ಪುತ್ರಿಗೆ ದೃಷ್ಟಿ ತರಿಸಿದ ಆಯುರ್ವೇದ ಚಿಕಿತ್ಸೆ
ನೈರೋಬಿ: ಆಲೋಪತಿ ವೈದ್ಯ ಪದ್ಧತಿ ಎಷ್ಟೇ ಬೆಳೆದಿದ್ದರೂ, ಭಾರತದ ಆಯುರ್ವೇದ ಪದ್ಧತಿ ಇನ್ನೂ ತನ್ನ ಜೀವಂತಿಕೆ ಕಾಯ್ದುಕೊಂಡಿದ್ದಾರೆ. ಇನ್ನೂ ಕೋಟಿ ಕೋಟಿ ಜನ ಆಯುರ್ವೇದ ಚಿಕಿತ್ಸೆಯನ್ನೇ ನಂಬುತ್ತಿದ್ದಾರೆ. ಅದ್ರಲ್ಲೂ ಕೀನ್ಯಾ ಮಾಜಿ ಪ್ರಧಾನಿ ಪುತ್ರಿಗೆ ಆಯುರ್ವೇದ ಚಿಕಿತ್ಸೆಯಿಂದ ದೃಷ್ಟಿ ಬಂದಿದೆ.
ಹೌದು, ಕೀನ್ಯಾ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ಪುತ್ರಿಗೆ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲಾಗಿತ್ತು. ಇದರಿಂದಾಗಿ ಆಕೆಗೆ ದೃಷ್ಟಿ ಮರಳಿ ಬಂದಿದೆ. ಈ ಬಗ್ಗೆ ಪತಿಕ್ರಿಯೆ ನೀಡಿರುವ ರೈಲಾ ಅವರು, ಆಯುರ್ವೇದ ಶಕ್ತಿಯಿಂದ ನನ್ನ ಮಗಳು ಮರಳಿ ದೃಷ್ಟಿ ಪಡೆದಿದ್ದಾಳೆ. ಈ ಅಮೂಲ್ಯ ಚಿಕಿತ್ಸೆಯನ್ನು ಆಫ್ರಿಕಾದಲ್ಲಿ ಆರಂಭಿಸಬೇಕು. ಇಲ್ಲಿನ ಔಷಧಿ ಸಸ್ಯಗಳನ್ನು ಬೆಳೆಯಲು ನಮ್ಮಲ್ಲಿ ಪೂರಕ ವಾತಾವರಣವಿದೆ ಎಂದಿದ್ದಾರೆ.
2017ರಲ್ಲಿ ಟ್ಯೂಮರ್ ಸಮಸ್ಯೆಗೆ ತುತ್ತಾದ ರೋಸಮೇರಿ ಕಣ್ಣಿನ ದೃಷ್ಟಿ ಕಳೆದುಕೊಂಡರು. ಬಳಿಕ ಆಫ್ರಿಕಾ, ಜರ್ಮನಿ, ಇಸ್ರೇಲ್, ಚೀನಾ ಸೇರಿದಂತೆ ಕೆಲ ದೇಶಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಶ್ರೀಧಾರೀಯಂ ಆಯು ರ್ವೇದ ಕಣ್ಣಿ ಆಸ್ಪತ್ರೆ ಕುರಿತು ಮಾಹಿತಿ ಪಡೆದು ನೇರವಾಗಿ ಕೇರಳಕ್ಕೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ.