National

ಆಕ್ಷೇಪಾರ್ಹ ಟ್ವೀಟ್‌; ರಾಹುಲ್‌ ಗಾಂಧಿ ವಿರುದ್ಧ 1000 ದೂರು

ದಿಸ್ಪುರ್: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮಾಡಿರುವ ವಿವಾದಾತ್ಮಕ ಟ್ವೀಟ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ರಾಹುಲ್‌ ಗಾಂಧಿ ವಿರುದ್ಧ ಅಸ್ಸಾಂನ ವಿವಿಧ ಪೊಲೀಸ್ ಠಾಣೆಗಳಲ್ಲಿ 1,000 ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಲಾಗಿದೆ.

ಅರುಣಾಚಲ ಪ್ರದೇಶ ತನ್ನ ದೇಶದ ಭಾಗವಾಗಿದೆ ಎಂಬ ಚೀನಾದ ಹೇಳಿಕೆಯನ್ನು ರಾಹುಲ್ ಗಾಂಧಿ ಟ್ವೀಟ್ ಪರೋಕ್ಷವಾಗಿ ಬೆಂಬಲಿಸುತ್ತದೆ ಎಂದು ಆರೋಪಿಸಲಾಗಿದೆ.  ರಾಹುಲ್ ಗಾಂಧಿ ಅವರ ಟ್ವೀಟ್ ಪ್ರತ್ಯೇಕತಾವಾದಿ ಮನಸ್ಥಿತಿಯನ್ನು ವ್ಯಕ್ತಪಡಿಸಿದೆ. ಇದು ಹಳೆಯ ಪಕ್ಷದ ಸಿದ್ಧಾಂತವನ್ನು ಮತ್ತೆ ತೋರಿಸಿ ದಂತಿದೆ. ಕಾಂಗ್ರೆಸ್ ಪಕ್ಷವು ಭಾರತಕ್ಕೆ ಅಪಾಯ. ರಾಹುಲ್ ಗಾಂಧಿ ಅವರು ಭಾರತದ ದೊಡ್ಡ ಸಮಸ್ಯೆ ಎಂದು ಯುವ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ.

Share Post