CrimeNational

ವಿದ್ಯಾರ್ಥಿಯನ್ನು ಮನಸೋ ಇಚ್ಛೆ ಥಳಿಸಿದ ಶಿಕ್ಷಕ:ಕೋಮಾದಲ್ಲಿ ಸ್ಟೂಡೆಂಟ್

ಚಿತ್ತೂರು:‌  ಜಿಲ್ಲೆಯ ಪಲಮನೇರು ಎಮ್ಮಾಸಿನ್ ಮಿಷನರಿ ಶಾಲೆಯಲ್ಲಿ ದುರಂತವೊಂದು ನಡೆದಿದೆ. ಶಿಕ್ಷಕನ ಕೋಪಕ್ಕೆ ವಿದ್ಯಾರ್ಥಿ ಆಸ್ಪತ್ರೆ ಬೆಡ್‌ ಮೇಲೆ ಕೋಮಾ ಸ್ಥಿತಿಯಲ್ಲಿದ್ದಾನೆ.  ವಿದ್ಯಾರ್ಥಿಯಂಬುದನ್ನೂ ನೋಡದೆ ಮನಸೋ ಇಚ್ಛೆ ಥಳಿಸಿದ್ದಾರೆ. ಕೋಮಾದಲ್ಲಿರುವ ಬಾಲಕನಿಗೆ ತಿರುಪತಿ ಸ್ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಾರದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರೋಹಿತ್ ಎಂಬ ವಿದ್ಯಾರ್ಥಿ ಮಿಷನರಿ ಸಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ ಎನ್ನಲಾಗಿದೆ. ಜ್ವರದಿಂದ ಬಳಲುತ್ತಿದ್ದ ರೋಹಿತ್‌ ಶಾಲೆಗೆ ಹೋಗಿದ್ದಾನೆ. ಗಣಿತ ಟಿಚರ್‌ ಜ್ಯೋತಿಶ್ವರ್‌ ರೋಹಿತ್ ಗೆ ಪ್ರಶ್ನೆ ಕೇಳಿದ್ದಾರೆ. ಮೊದಲೇ ಜ್ವರದಿಂದ ಬಳಲುತ್ತಿದ್ದ ಬಾಲಕ ಉತ್ತರ ನೀಡದೆ ತಲೆ ಕೆಳಗೆ ಮಾಡಿದ್ದಾನೆ. ಅಷ್ಟಕ್ಕೆ ಕೋಪಗೊಂಡು ವಿದ್ಯಾರ್ಥಿಯ ತಲೆ ಹಿಡಿದು ಬೆಂಚಿಗೆ ಕುಟ್ಟಿದ್ದಾನಂತೆ. ಘಟನೆ ನಡೆದ ಎರಡು ದಿನಗಳ ಬಳಿಕ ರೋಹಿತ್‌ ಅಸ್ವಸ್ಥನಾಗಿ ಮಾತು ಕೂಡ ನಿಂತು ಹೋಗಿದೆ.

ರೋಹಿತ್ ಪರಿಸ್ಥಿತಿ ನೋಡಿ ಅವರ ತಂದೆ-ತಾಯಿ  ಆತಂಕದಿಂದ ತಿರುಪತಿ  ಸ್ವಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಘಟನೆ ಬಳಿಕ ರೋಹಿತ್ ನನ್ನು ಥಳಿಸಿದ ಶಿಕ್ಷಕನನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದೆ. ಘಟನೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Share Post