CrimeDistricts

ಚಿನ್ನದಂಗಡಿ ಮಾಲೀಕನಿಂದ ವಂಚನೆ , ಮಹಿಳೆಗೆ ನಕಲಿ ಚಿನ್ನ ನೀಡಿ ಮಕ್ಮಲ್‌ ಟೋಪಿ

ತುಮಕೂರು: ಚಿನ್ನ ಅಂದ್ರೆ ಯಾರಿಗ್‌ ತಾನೆ ಇಷ್ಟ ಇರಲ್ಲ ಹೇಳಿ ಅದರಲ್ಲೂ ಹೆಣ್ಣುಮಕ್ಕಳಗೆ ಬಹಳ ಪ್ರಿಯವಾದ ವಸ್ತು ಅಂದ್ರೆ ಅದು ಚಿನ್ನಾನೆ, ಅನೇಕ ಡಿಸೈನ್‌ ವೆರೈಟಿ ವೆರೈಟಿ ಅಭರಣಗಳು ಮಹಿಳೆಯರನ್ನು ಆಕರ್ಷಿಸುತ್ತವೆ. ಬರೀ ನೋಡೋಕಷ್ಟೇ ಅಲ್ಲ ಅದೊಂಥರ ಇನ್ವೆಸ್ಟ್‌ಮೆಂಡ್‌ ಇದ್ದಂಗೆ. ಕಷ್ಟಕಾಲದಲ್ಲಿ ಒಡವೆ ಅಡ ಇಟ್ಟು ತಮ್ಮ ಸಮಸ್ಯೆಗಳನ್ನು ಪರಿಹಿರಿಸಕೊಳ್ಳಬಹುದು ಎಂಬ ಕಾರಣಕ್ಕೂ ಜನ ಚಿನದ ಮೊರೆ ಹೋಗುತ್ತಾರೆ. ಮದುವೆಯಂತಹ ಶುಭ ಸಮಾರಂಭಗಳಲ್ಲಿ ಚಿನ್ನದ ಶಾಪಿಂಗ್‌ ಬಲು ಜೋರಾಗೇ ಇರುತ್ತದೆ. ಎಂಥವರಿಗೆ ಚಿನ್ನ ಹಾಕಬೇಕೆಂಬ ಆಸೆ ಇರುತ್ತದೆ. ಹಾಗಾಗಿ ಕಷ್ಟ ಪಟ್ಟು ದುಡಿದ ಹಣದಲ್ಲಿ ಚಿನ್ನ ಖರೀದಿ ಮಾಡ್ತಾರೆ.

ಹಾಗೆಯೇ ಇಲ್ಲೊಬ್ಬ ಮಹಿಳೆ ಕಷ್ಟಪಟ್ಟು ದುಡಿದ ಹಣದಲ್ಲಿ ಚಿನ್ನದ ಮಾಂಗಲ್ಯ ಸರ ಕೊಂಡುಕೊಂಡಿದ್ದಾರೆ. ಆದರೆ ಅದು ನಕಲಿ ಎಂದು ತಿಳಿದ ಮೇಲೆ ಜ್ಯುವೆಲ್ಲರಿ ಶಾಪ್‌ ಮುಂದೆ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ಗೌರಿಬಿದನೂರು ತಾಲೂಕಿನ ಸಾರಗುಂಡ್ಲು ಗ್ರಾಮದ ಮಂಜುಳಾ ಎಂಬುವವರು 2021 ಜುಲೈ 10ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿರುವ ಗುಪ್ತಾ ಜ್ಯೂಯಲರ್ಸ್‌ನಲ್ಲಿ 1ಲಕ್ಷ 48 ಸಾವಿರ ಮೌಲ್ಯದ 30 ಗ್ರಾಂ ಮಾಂಗಲ್ಯದ ಸರ ಖರೀದಿಸಿದ್ದರು. ದಿನ ಕಳೆದಂತೆ ಚಿನ್ನದ ಸರ ಕಪ್ಪು ಬಣ್ಣಕ್ಕೆ ತಿರುಗಿದೆ. ಅಕ್ಕಸಾಲಿಗರ ಬಳಿ ಪರೀಕ್ಷೆ ಮಾಡಿಸಿದಾಗ 30ಗ್ರಾಂ ಸರ 23ಗ್ರಾಂಗೆ ಇಳಿದಿದೆ.

ಇದರಿಂದ ಆಘಾತಕ್ಕೊಳಗಾದ ಮಹಿಳೆ ಶಾಪ್‌ ಮಾಲೀಕನ ಬಳಿ ಬಂದು ಪ್ರಶ್ನೆ ಮಾಡಿದ್ದಾಳೆ. ಗುಪ್ತ ಜ್ಯುಯಲರ್ಸ್ ಮಾಲೀಕ ನವೀನ್ ಮಂಜುಳಾಗೆ ಜಿಎಸ್​ಟಿ ಬಿಲ್ ನೀಡದೇ, ನಕಲಿ ರಶೀದಿ ನೀಡಿದ್ದರಂತೆ.  ಮಹಿಳೆಯ ಪ್ರಶ್ನೆ ಮಾಡಿದ್ದಕ್ಕೆ ಮತ್ತೊಮ್ಮೆ ಪರೀಕ್ಷಿಸಿ ಹೊಸದಾಗಿ ನೀಡುವ ಭರವಸೆ ನೀಡಿದ್ದಾರೆ. ಅದೇ ನಂಬಿಕೆಯಿಂದ ಇದ್ದ ಮಹಿಳೆ ಮಾಲೀಕನಿಂದ ಮೋಸ ಹೋಗಿದ್ದಾಳೆ. ಗ್ರಾಹಕಿಯಿಂದ ನಕಲಿ ಬಿಲ್, ಮಾಂಗಲ್ಯದ ಸರ ಎರಡನ್ನು ಹಿಂದಕ್ಕೆ ಪಡೆದಿದ್ದಾರೆ. 15 ದಿನ ಕಳೆದರೂ ಹಣವು ನೀಡದೇ ಬಂಗಾರವು ನೀಡದೇ ವಂಚನೆ ಮಾಡಿದ್ದಾರೆ ಎಂದು ಜ್ಯೂಯಲರಿ ಶಾಪ್‌ ಮುಂದೆ ಮಹಿಳೆ ಕಣ್ಣೀರು ಹಾಕಿದ್ದಾಳೆ.

Share Post