Sports

ವಾಶಿಂಗ್ಟನ್ ಸುಂದರ್‌ ಬದಲು ಕುಲ್ದೀಪ್‌ಗೆ ಸ್ಥಾನ

ಬೆಂಗಳೂರು : ವೆಸ್ಟ್‌ ಇಂಡೀಸ್‌ ವಿರುದ್ಧ ಟಿ20 ಸರಣಿಗೆ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಅಲಭ್ಯರಾಗಿದ್ದಾರೆ. ಗಾಯದ ಸಮಸ್ಯೆಯ ಕಾರಣದಿಂದಾಗಿ ವಾಶಿಂಗ್ಟನ್‌ ಸುಂದರ್‌ ಸರಣಿಯಿಂದ ಹೊರ ಬಿದ್ದಿದ್ದಾರೆ. ದೀರ್ಘಾವಧಿಯ ಕಾಲ ತಂಡದಿಂದ ದೂರ ಉಳಿದಿದ್ದ ವಾಶಿಂಗ್ಟನ್‌ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದರು.

ಮೂರನೇ ಪಂದ್ಯದ ಮುನ್ನ ಅಭ್ಯಾಸ ನಡೆಸುವಾಗ ಮಂಡಿ ಸ್ನಾಯು ಸಮಸ್ಯೆಗೆ ಒಳಗಾಗಿ ಮತ್ತೊಮ್ಮೆ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕುಲ್‌ದೀಪ್‌ ಯಾದವ್‌ ಅವರಿಗೆ ಟಿ20 ಯಲ್ಲಿ ಸ್ಥಾನ ದೊರೆತಿದೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಕೊನೆಯ ಪಂದ್ಯದಲ್ಲಿ ಎರಡು ವಿಕೆಟ್‌ ಪಡೆದಿದ್ದ ಕುಲ್ದೀಪ್‌ ಯಾದವ್‌ ಅವರನ್ನು ಚುಟುಕು ಕ್ರಿಕೆಟ್‌ನಲ್ಲಿ ಕಣಕ್ಕಿಳಿಸಲು ಟೀಂ ಇಂಡಿಯಾ ತೀರ್ಮಾನಿಸಿದೆ.

ವಾಷಿಂಗ್ಟನ್ ಸುಂದರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರಕ್ಕೆ ಒಳಪಡಲಿದ್ದಾರೆ. ಕನಿಷ್ಠ ಮೂರು ವಾರಗಳ ಕಾಲ ವಾಷಿಂಗ್ಟನ್‌ ಚಿಕಿತ್ಸೆ ಪಡೆಯುವರು ಎಂದು ತಿಳಿಸಿದ್ದಾರೆ.

Share Post