ಪ್ರೇಮಿಗಳ ದಿನಾಚರಣೆ: ಗೂಗಲ್‌ನಿಂದ ಹೊಸ ಆವಿಷ್ಕಾರ ಪದ ಜೋಡಿಸಿ..ಆಟ ಆಡಿ
ಪ್ರೇಮಿಗಳ ದಿನವಾದ ಇಂದು ಗೂಗಲ್ ವಿಶೇಷ ಡೂಡಲ್ನೊಂದಿಗೆ ಶುಭಾಶಯಗಳನ್ನು ಕೋರಿದೆ. ಡೂಡಲ್ ನೋಡಲು ಅಷ್ಟೇ ಅಲ್ಲ ಆಸಕ್ತಿಕರವಾದ ಆಟ ಕೂಡ ಹೌದು..ಹೊಸ ತಂತ್ರಜ್ಞಾನದೊಂದಿಗೆ ಗೇಮ್ ಶುರು ಮಾಡಿದೆ ಗೂಗಲ್. ಬೇರ್ಪಡಿಸಿದ ಅಕ್ಷರಗಳನ್ನು ಒಟ್ಟಿಗೆ ಸೇರಿಸುವ ಒಗಟು ಪದದ ಹಾಗಿದೆ. ಈ ಸುಲಭವಾದ ಒಗಟನ್ನು ಪೂರ್ಣಗೊಳಿಸಲು Google 30 ಸೆಕೆಂಡುಗಳ ಸಮಯ ನೀಡಿದೆ.
ಈ ಪ್ರೀತಿ ಎಂಬುದು ಮಾಯೆ. ಅನೇಕ ಏಳುಬೀಳುಗಳು ಕೂಡಾ ಪ್ರೀತಿಯಲ್ಲಿ ಸಹಜ. ಕಾಲ ಕಳೆದಂತೆ ಉಂಟಾಗುವ ಮಜಲುಗಳು ಕೂಡ ಕಡಿಮೆಯೇನಲ್ಲ. ಉಂಟಾದ ಏರಿಳಿತಗಳನ್ನು ದಾಟಿ ಇಬ್ಬರನ್ನೂ ಒಂದೇ ಜಗತ್ತಿಗೆ ಕೊಡೊಯ್ಯುವುದೇ ಪ್ರೀತಿ..’Google Doodle ಇಂದು 3D ಡೂಡಲ್‌ನೊಂದಿಗೆ ವಿಶೇಷವಾದ ಗೇಮ್ ಪ್ಲಾನ್ ಮಾಡಿದೆ. ದಾಋಇ ತಪ್ಪಿರುವ ಈ ಎರಡೂ ಗೊಂಬೆಗಳಿಗೆ ದಾರಿ ತೋರಿಸುತ್ತೀರಾ ಎಂದು ಶೀರ್ಷಿಕೆ ನೀಡೆ ಗೇಮ್ ಡಿಸೈನ್ ಮಾಡಿದೆ.
ಗೂಗಲ್‌ನವರು ಡಿಸೈನ್ ಮಾಡಿರುವ ಗೇಮ್ ಆಡುವ ಇಚ್ಛೆಯಿದ್ದರೆ. ಬೇರೆಯಾಗಿರುವ ಪದಗಳನ್ನು ಒಂದುಗೂಡಿಸುವ ಮನಸ್ಸಿದ್ದರೆ ಇಲ್ಲಿ ಕ್ಲಿಕ್ ಮಾಡಿ .. ಗೂಗಲ್ ಡೂಡಲ್
ಸೇಂಟ್ ವ್ಯಾಲೆಂಟೈನ್ ನೆನಪಿಗಾಗಿ ಪ್ರತಿ ವರ್ಷ ಪ್ರೇಮಿಗಳ ದಿನವನ್ನು ಆಚರಿಸುತ್ತೇವೆ. ಮೂರನೇ ಶತಮಾನದಲ್ಲಿ ಜೀವಿಸಿದ್ದ ರೋಮನ್ ಸಂತನ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ಆರಂಭದ ದಿನಗಳಲ್ಲಿ ಇಬ್ಬರು ಕ್ರೈಸ್ತರ ಸ್ಮರಣಾರ್ಥ ಈ ದಿನವನ್ನು ಆಚರಣೆ ಮಾಡಲಾಗುತ್ತಿತ್ತು. ಕಾಲಾನಂತರದಲ್ಲಿ ವಾಣಿಜ್ಯಮಯವಾಗುತ್ತಾ ಪ್ರಣಯ, ಪ್ರೀತಿ ಮತ್ತು ಸಂಬಂಧಗಳಿಗೆ ಈ ದಿನ ಕಾರಣವಾಗಿದೆ.